ಚಳ್ಳಕೆರೆ: ಕೆಸ್ ಅರ್ ಟಿಸಿ ಬಸ್ ಬೈಕ್ ನಡುವೆ
ಅಪಘಾತ
ಚಳ್ಳಕೆರೆಯ ಚಳ್ಳಕೆರಮ್ಮ ದೇವಸ್ಥಾನದ ಬಳಿ ಸೋಮವಾರ
ಸಂಜೆ ಕೆಎಸ್‌ಆರ್‌ಟಿಸಿ ಬಸ್ ಮತ್ತು ಬೈಕ್ ನಡುವೆ ಸಂಭವಿಸಿದ
ಭೀಕರ ಅಪಘಾತದಲ್ಲಿ ಬೈಕ್ ಸವಾರನ ಕಾಲು ಮುರಿದು
ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಬಳ್ಳಾರಿಯಿಂದ ಚಿತ್ರದುರ್ಗದ
ಕಡೆಗೆ ಹೊರಟಿದ್ದ ಬಸ್, ಚಿತ್ರನಾಯಕನಹಟ್ಟಿಯಿಂದ ಚಳ್ಳಕೆರೆಗೆ
ಬರುತ್ತಿದ್ದ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಗಾಯಾಳುವನ್ನು ಚಳ್ಳಕೆರೆ
ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಳ್ಳಕೆರೆ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

