ಚಿತ್ರದುರ್ಗ: ಮ್ಯೂಸಿಯಂ ಕೆಲಸ ವೀಕ್ಷಿಸಿದ
ಜಿಲ್ಲಾಧಿಕಾರಿ
ರಾಷ್ಟ್ರನಾಯಕ, ಮಾಜಿ ಮುಖ್ಯಮಂತ್ರಿ ದಿ. ಎಸ್. ನಿಜಲಿಂಗಪ್ಪ
ಅವರ ಚಿತ್ರದುರ್ಗದ ಮನೆಯನ್ನು ಸರ್ಕಾರ ಮ್ಯೂಸಿಯಂ ಆಗಿ
ಪರಿವರ್ತಿಸಲು ನಿರ್ಧರಿಸಿದೆ. ‘ಶ್ವೇತಭವನ’ವೆಂದೇ ಕರೆಯಲ್ಪಡುವ
ಈ ಮನೆಯ ದುರಸ್ತಿ ಕಾರ್ಯ ಪ್ರಗತಿಯಲ್ಲಿದ್ದು, ಇದನ್ನು ನಿರ್ಮಿತಿ
ಕೇಂದ್ರ ಮತ್ತು ಭಾರತೀಯ ಪುರಾತತ್ವ ಇಲಾಖೆ ಜಂಟಿಯಾಗಿ
ನಡೆಸುತ್ತಿವೆ. ಕಾಮಗಾರಿಯ ಗುಣಮಟ್ಟವನ್ನು ಡಿಸಿ ಟಿ. ವೆಂಕಟೇಶ್
ಪರಿಶೀಲಿಸಿ, ಗುಣಮಟ್ಟ ಕಾಯ್ದುಕೊಳ್ಳುವಂತೆ ಸೂಚನೆ ನೀಡಿದ್ದಾರೆ.

