ಚಳ್ಳಕೆರೆ : ನಿವೇಶನ ರಹಿತ ನೂರಾರು ಫಲಾನುಭವಿಗಳು ಸ್ವಂತ ನಿವೇಶನದ ಹಕ್ಕು ಪತ್ರದ ಖಾತೆಗಾಗಿ ಕಳೆದ 16 ದಿನಗಳಿಂದ ಅಹೋರಾತ್ರಿ ಧರಣಿ ಸತ್ಯಾಗ್ರಹ ಇಂದು ಅಂತ್ಯ ಕಂಡಿದೆ.
ಚಳಿ ಗಾಳಿ ಎನ್ನದೆ ನಗರದ ತಾಲೂಕು ಪಂಚಾಯತಿ ಮುಂಬಾಗ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ತಾಲೂಕಿನ ಗೊಸಿಕೆರೆ ಗ್ರಾಮದ ನೂರಾರು ಫಲಾನುಭವಿಗಳಿಗೆ ಸು.87 ಹಕ್ಕು ಪತ್ರಗಳನ್ನು ನೀಡುವ ಮೂಲಕ ನಿವೇಶ ನೀಡಿದ್ದಾರೆ.
ರಸ್ತೆ ಬದಿಯಲ್ಲಿ ಅಡುಗೆ ಮಾಡಿಕೊಂಡು, ನಿವೇಶನಕ್ಕಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದ ಸ್ಥಳಕ್ಕೆ ಸ್ಥಳೀಯ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ಹಾಗೂ ಜಿಲ್ಲಾಧಿಕಾರಿ, ಜಿಲ್ಲಾ ಉಪವಿಭಾಗ ಅಧಿಕಾರಿಗಳು, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ತಹಶಿಲ್ದಾರ್ ರೇಹಾನ್ ಪಾಷ, ಇಓ ಹೆಚ್. ಶಶಿಧರ್ ಈಗೇ ಜಿಲ್ಲಾ ಮಟ್ಟ, ತಾಲೂಕು ಮಟ್ಟದ ಅಧಿಕಾರಿಗಳು ಬೇಟಿ ನೀಡಿ ನಿವೇಶನ ರಹಿತರಿಗೆ ನಿವೇಶನ ನೀಡುವ
ಭರವಸೆಯನ್ನು ನೀಡಿದ್ದರು ಅದರಂತೆ ಇಂದು ಸುಮಾರು 87 ಹಕ್ಕು ಪತ್ರದ ಖಾತೆಯೊಂದಿಗೆ ಫಲಾನುಭವಿಗಳಿಗೆ ಉಪವಿಭಾಗಧಿಕಾರಿ ಬಿಟಿ.ಕುಮಾರಸ್ವಾಮಿ, ತಹಶಿಲ್ದಾರ್ ರೇಹಾನ್ ಪಾಷ, ಇಓ.ಹೆಚ್.ಶಶಿಧರ್
ಹಕ್ಕು ಪತ್ರ ನೀಡಿ ಧರಣಿ ಕೈ ಬಿಡುವಂತೆ ಹೇಳಿದ್ದಾರೆ.
ಅದರಂತೆ 16 ನೇ ದಿನದಂದು ದಲಿತ ಸಂಘರ್ಷ ಸಮಿತಿ ರಾಜ್ಯಾಧಕ್ಷ
ಟಿಡಿ.ರಾಜಗಿರಿ, ಜಿಲ್ಲಾ ಅಧ್ಯಕ್ಷ ಮಂಜುನಾಥ್ ನೇತೃತ್ವದಲ್ಲಿ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದ್ದಾರೆ.

