ಚಳ್ಳಕೆರೆ : ಮನೆ ಮನೆಗೆ ಪೋಲೀಸ್ ಬೇಟಿ ಕಾರ್ಯಚರಣೆ ಕಳೆದ ಮೂರು ತಿಂಗಳಿನಿಂದ ಉತ್ತಮ ಪ್ರಗತಿ ಕಂಡಿದೆ.
ಅದರಂತೆ ಚಳ್ಳಕೆರೆ ನಗರದ 31 ವಾರ್ಡ್ ಗಳಿಗೆ ನಗರ ಠಾಣೆಯಿಂದ ಸೀಮಿತ ಗೊಳಿಸಿದ ಬೀಟ್ ಪೋಲೀಸ್ ವ್ಯಾಪ್ತಿಯಲ್ಲಿ ಆಯಾ ಸಿಬ್ಬಂದಿ ಮನೆ ಮನೆಗೆ ಬೇಟಿ ನೀಡಿ ಮಾಹಿತಿ ಜೊತೆಗೆ ಜಾಗೃತಿ ಮೂಡಿಸುವ ಮೂಲ ಉದ್ದೇಶದೊಂದಿಗೆ ಕಾರ್ಯಕ್ರಮ ಮುಗಿಯುವ ಹಂತಕ್ಕೆ ತಲುಪಿದೆ.
ಅದರಂತೆ ಜನತಾ ಕಾಲೋನಿಯಲ್ಲಿ ಪೋಲೀಸ್ ಪೇದೆ ತಿಲಕ್ ರಾಜ್, ಹಾಗೂ ಸುನಿಲ್ ಪ್ರತಿ ಮನೆಗೆ ಬೇಟಿ ನೀಡಿ ಜಾಗೃತಿ ಮೂಡಿಸುತ್ತಿದ್ದಾರೆ.
ಅದರಂತೆ ನಗರದಲ್ಲಿ ಹೊಸಬರ ಚಲನವಲನಗಳು, ಹಾಗೂ ವ್ಯಾಪಾರ ಸೋಜಿಗದಲ್ಲಿ ಮನೆಗೆ ಬೇಟಿ ನೀಡುವುದು ಓಂಟಿ ಮನೆ, ಹಾಗೂ ಬೀಗ ಹಾಕಿರುವ ಮನೆಗಳ ವಾರಸುದಾರರು ತಪ್ಪದೆ ಪೋಲೀಸ್ ಇಲಾಖೆಗೆ ಮಾಹಿತಿ ನೀಡಬೇಕು, ನಿಮ್ಮ ರಕ್ಷಣೆಗೆ ನಾವು ಸದಾ ಸಿದ್ದರಿದ್ದೆವೆ ಎಂದು ಪೋಲೀಸ್ ಪೆದೆ ತಿಲಕ್ ರಾಜ್ ಜಾಗೃತಿ ಮೂಡಿಸಿದ್ದಾರೆ.

