filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 46;

ಚಳ್ಳಕೆರೆ :

ಚಳ್ಳಕೆರೆ ನಗರ ಪಾವಗಡ ರಸ್ತೆ, ರೈಲ್ವೆ ಗೇಟ್ ನಂ:45 ಮೇಲೇತುವೆ ನಿರ್ಮಿಸಲು ಭೂ ಸ್ವಾಧೀನ
ಪ್ರಕ್ರಿಯೆ ಸರ್ವೆ ನಡೆಸಲು 7 ದಿವಸಗಳೊಳಗಾಗಿ ಸಂಬಂಧಪಟ್ಟ ಅಧಿಕಾರಿಗಳನ್ನು ಮತ್ತು
ಪ್ರಜಾಪ್ರತಿನಿಧಿಗಳನ್ನು ಕರೆಸಿ ಸಾರ್ವಜನಿಕರಿಗೆ ಅನುಕೂಲ ಮಾಡಬೇಕು ಇಲ್ಲವಾದರೆ ಉಗ್ರವಾದ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಹಾಗೂ ಅಖಂಡ ಕರ್ನಾಟಕ ರೈತ ಸಂಘದಿಂದ ನಗರಸಭೆಗೆ ಮನವಿ ಸಲ್ಲಿಸಿದ್ದಾರೆ.

ಇನ್ನೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾತನಾಡಿ,
ಮೇಲೇತುವೆ ನಿರ್ಮಿಸಲು ಕಳೆದ 14ವರ್ಷಗಳಿಂದಲೂ ನಗರದ ಎಲ್ಲಾ ಸಂಘ-
ಸಂಸ್ಥೆಗಳು ರೈತ ಸಂಘಟನೆಗಳ ಜೊತೆಗೂಡಿ ಮೇಲ್ಲೇತುವ ನಿರ್ಮಿಸಲು ರೈಲು ತಡೆ ಮತ್ತು ಧರಣಿ ಸತ್ಯಾಗ್ರಹವನ್ನು ಮಾಡಿದರೂ ಸಹ
ಇಲ್ಲಿಯವರೆಗೂ ಯಾವುದೇ ಅಭಿವೃದ್ಧಿ ಕಾಮಗಾರಿ ಕೈಗೊಂಡಿರುವುದಿಲ್ಲ. ಚಳ್ಳಕೆರೆ ನಗರ ದಿನೇದಿನೇ ಬೆಳೆಯುತ್ತಿದ್ದು, ಭೂ ಸ್ವಾಧೀನ
ಪ್ರಕ್ರಿಯೆ ವಿಳಂಬವಾಗುತ್ತಿದ್ದು, ಈ ಸಭೆಗೆ ಜಿಲ್ಲಾಧಿಕಾರಿಗಳು, ಜಿಲ್ಲಾ ಉಪವಿಭಾಗಾಧಿಕಾರಿಗಳು, ರೈಲ್ವೆ ಅಧಿಕಾರಿಗಳು, ಹಾಗೂ
ಲೋಕಸಭಾ ಸದಸ್ಯರು ಈ ಭಾಗ ಶಾಸಕರು ಹಾಗೂ ತಹಸೀಲ್ದಾರ್‌ರವರು ಸಭೆಯ ದಿನಾಂಕವನ್ನು ನಿಗಧಿಪಡಿಸಿ ಭೂ ಸ್ವಾಧೀನ
ಅಕ್ವಿಜೇಷನ್ ಪ್ರಕಾರವಾಗಿ ಮೇಲ್ವೇತುವೆಗೆ ಬೇಕಾಗಿರುವ ಜಮೀನನ್ನು ಸರ್ಕಾರಕ್ಕೆ ಸ್ವಾಧೀನಪಡಿಸಿಕೊಂಡು ಅತಿ ಶೀಘ್ರದಲ್ಲಿ ಮೇಲೇತುವೆ
ನಿರ್ಮಿಸಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷ ರೆಡ್ಡಿಹಳ್ಳಿ ವೀರಣ್ಣ ಮಾತನಾಡಿ,

ಈ ಮೇಲ್ವೇತುವೆ ವಿಚಾರವಾಗಿ 2014ರಿಂದ ಹಿಡಿದು ಆಗಿನ ರೈಲ್ವೆ ಸಚಿವರಾದ ಸದಾನಂದಗೌಡ,
ಚಂದ್ರಪ್ಪ, ಜನಾರ್ಧನಸ್ವಾಮಿ, ಎಂ.ನಾರಾಯಣಸ್ವಾಮಿ, ಈಗಿನ ಲೋಕಸಭಾ ಸದಸ್ಯರಾದ ಗೋವಿಂದ ಎಂ.ಕಾರಜೋಳ, ಕೇಂದ್ರ ರೈಲ್ವೆ
ಸಚಿವರಾದ ವಿ.ಸೋಮಣ್ಣನವರಿಗೂ, ಹುಬ್ಬಳ್ಳಿ ವಿಭಾಗದ ರೈಲ್ವೆ ಸೂಪರಿಂಟೆಂಡೆಂಟ್ ಮತ್ತು ಮೈಸೂರು ವಿಭಾಗದ ಡಿವಿಜನ್
ಕಮಿಷನರ್ ಹೀಗೆ ಎಲ್ಲರ ಗಮನಕ್ಕೆ ತಂದರೂ ಕೂಡ ಯಾವುದೇ ಕ್ರಮ ಕೈಗೊಂಡಿರುವುದಿಲ್ಲ ಅದ್ದರಿಂದ ಅತೀ ತುರ್ತಾಗಿ ಮೆಲ್ಸೆತುವೆ ಮಾಡಬೇಕು ಎಂದರು.

ಅಖಂಡ ಕರ್ನಾಟಕ ರಾಜ್ಯ ರೈತ ಸಂಘದ ಚಿಕ್ಕಣ್ಣ, ಮಾತನಾಡಿ,
ಕೆಲವೆ ದಿನಗಳೊಳಗಾಗಿ ಅಧಿಕಾರಿಗಳ ಎಲ್ಲರನ್ನೂ ಕರೆಸಿ ಮೇಲೇತುವೆ ಕಾರ್ಯಾರಂಭ
ಮಾಡಲು ರೈತಸಂಘ ಒತ್ತಾಯಿಸುತ್ತದೆ ಎಂದರು.

About The Author

Namma Challakere Local News
error: Content is protected !!