filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 39;

ಚಳ್ಳಕೆರೆ : ಚಳ್ಳಕೆರೆ ನಗರಸಭೆ ಸಭಾಂಗಣದಲ್ಲಿ ನಗರಸಭೆ ಅಧ್ಯಕ್ಷರಾದ ಆರ್ ಮಂಜುಳಾ ಪ್ರಸನ್ನ ಕುಮಾರ್ ಅಧ್ಯಕ್ಷತೆಯಲ್ಲಿ ಕೌನ್ಸಿಲ್ ತುರ್ತು ಸಭೆಯನ್ನು ನಡೆಸಲಾಯಿತು.

ಈ ಸಭೆಯಲ್ಲಿ ಪ್ರಧಾನಮಂತ್ರಿ ಅವಾಸ್ ಯೋಜನೆಯ ಸರ್ವರಿಗೂ ಕಲ್ಪಿಸುವಯೋಜನೆ, ಅನುಷ್ಠಾನ ಹಾಗೂ ಬೀದಿನಾಯಿಗಳಿಗೆ ಸಂತಾನ ನಿಯಂತ್ರಣ ಮಾಡಿಸಲ ಕರೆದಿರುವ ಟೆಂಟರ್, ಹಾಗೂ ಚಳ್ಳಕೆರೆ ನಗರದ ಪಾವಗಡ ರಸ್ತೆಯಲ್ಲಿ ರೈಲ್ವೆ ನಿಲ್ಸುತ್ತವೆ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾಗವನ್ನು ಹಸ್ತಾಂತರಿಸುವ ಭೂ ಸ್ವಾಧೀನ ಮಾಡಿಕೊಳ್ಳುವ ವಿಷಯದ ಬಗ್ಗೆ ತಹಶೀಲ್ದಾರ್ ರೆಹಾನ್ ಪಾಶ್ ರವರು ಅತಿ ತುರ್ತಾಗಿ ಭೂಸ್ವಾಧನಾಧಿಕಾರಿಗಳಿಂದ ನಗರಸಭೆಗೆ ಭೂ ಸ್ವಾದಿನ ಹಸ್ತಾಂತಸಲಾಗುವುದು ಎಂದು ಸಭೆಯ ಗಮನ ಹರಿಸಿದರು.

ನಂತರ
ಸೂರ್ ಇಲ್ಲದವರಿಗೆ ನಗರದಲ್ಲಿ ಸೋರು ಕಲ್ಪಿಸಲು ಪ್ರಧಾನ ಮಂತ್ರಿ ಅವಾಸ್ ಯೋಜನೆಯ ಏ ಎಚ್ ಪಿ ಸರ್ವರಿಗೂ ಸೂರು ಕಲ್ಪಿಸುವ ಉದ್ದೇಶದಿಂದ ಮನೆಗಳ ನಿರ್ಮಾಣಕ್ಕಾಗಿ ಚಳ್ಳಕೆರೆ ನಗರಸಭೆಗೆ 1008 ಫಲಾನುಭವಿಗಳ ಆಯ್ಕೆ ಪಟ್ಟಿಯನ್ನು ಆಶ್ರಯ ಸಮಿತಿಯಿಂದ ಅನುಮೋದನೆಯಾಗಿದ್ದು ಇದುವರೆಗೂ 158 ಫಲಾನುಭವಿಗಳು ಮಾತ್ರ ಫಲಾನುಗಳು ವಂತಿಕೆ ಪಾವತಿಸಿದ್ದು ಉಳಿದ ವಸತಿ ರಹಿತ ಫಲಾನುಭವಿಗಳನ್ನು ಆಯ್ಕೆ ಮಾಡಿಕೊಳ್ಳಲು ಎಂಬ ವಿಷಯ ಸಭೆ ಗಮನಕ್ಕೆ ಅಧಿಕಾರಿಗಳ ತಂದಾಗ ನಗರ ಸಭೆ ಸದಸ್ಯ ವಿ ವೈ ಪ್ರಮೋದ್ ಮಾತನಾಡಿ,

ಚಳ್ಳಕೆರೆ ನಗರಸಭೆ ಯಿಂದ
ಈಗಾಗಲೇ 198 ಫಲಾನುಭವಿಗಳ ನಿವೇಶನಗಳಿಗಾಗಿ ಹಕ್ಕುಪತ್ರ ನೀಡಿದ ಫಲಾನುಭವಿಗಳಿಗೆ, ಮೊದಲು ನಿವೇಶ ನೀಡಿ, ನಂತರ ಜಿಪ್ಲಸ್ ಟು ಮನೆಗಳನ್ನು ಕೊಡಿ,

ಮೊದಲು
ನಗರಸಭೆ ಅಂತವರಿಗೆ ನ್ಯಾಯ ಕೊಡಿಸಿ ನಂತರ ಆಯ್ಕೆ ಮಾಡಿ ಈಗಾಗಲೇ ಕಟ್ಟಿರುವಂತ ಸ್ಥಳದ ನೂರ ತೊಂಬತ್ತೆಂಟು ಫಲಾನುಭವಿಗಳಲ್ಲಿ ಮೂರು ಜನ ಲೋಕಾಯುಕ್ತ ಮೊರೆ ಹೋಗಿದ್ದು ತನಿಖೆ ನಡೆಯುತ್ತಿದೆ.

ಆದ್ದರಿಂದ ಜಿ ಪ್ಲಸ್ ಟು ಯೋಜನೆಯನ್ನು ಸಂಪೂರ್ಣವಾಗಿ ಕೈಬಿಡಬೇಕು ನಗರದ ಜನತೆಗೆ ಸ್ವಂತ ನಿವೇಶನ ಕಟ್ಟಿಕೊಳ್ಳಲು ಸ್ವಂತ ನಿವೇಶನ ಹಾಗೂ ವಸತಿ ಯೋಜನೆಯನ್ನು ಕಲ್ಪಿಸಲು ಅವಕಾಶ ಮಾಡಬೇಕು ಎಂದು ಹೇಳಿದಾಗ ನಗರಸಭೆ ಮತ್ತೋರ್ವ ಸದಸ್ಯ ಬಿಟಿ ರಮೇಶ್ ಗೌಡ,, ರಾಘವೇಂದ್ರ ಮಾತನಾಡಿ ,,

ಈಗಾಗಲೇ ಈ ಯೋಜನೆ ಮುಗಿಯುವ ಹಂತದಲ್ಲಿದ್ದು ಈ ಯೋಜನೆಗೆ 1008 ಫಲಾನುಭವಗಳನ್ನು ಆಯ್ಕೆ ಮಾಡುವ ಜವಾಬ್ದಾರಿ ನಗರಸಭೆಯ ಕರ್ತವ್ಯ , ನಗರದಲ್ಲಿ ಸೂರಿಲ್ಲದ ಎಷ್ಟೋ ಕಡುಬಡವರು ಸ್ವಂತ ಮನೆಯಾಗಿ ಕಾಯುತ್ತಿದ್ದಾರೆ.

ಅಂತವರಿಗೆ ಸೂರು ಕಲ್ಪಿಸುವ ವ್ಯವಸ್ಥೆ ಸರ್ವ ಸದಸ್ಯರುಗಳು ಹಾಗೂ ಅಧ್ಯಕ್ಷರು, ಶಾಸಕರು ಮಾಡಿದ್ದಾರೆ ಅತಿ ತುರ್ತಾಗಿ ಬಡ ಜನರಿಗೆ ಮನೆಗಳನ್ನು ನೀಡುವ ಕೆಲಸ ಹಾಗಲಿ ಎಂದರು.

ಇದೇ ಸಂಧರ್ಭದಲ್ಲಿ ನಗರಸಭೆ ಅಧ್ಯಕ್ಷೆ ಆರ್.ಮಂಜುಳಾ, ಉಪಾಧ್ಯಕ್ಷೆ ಕವಿತಾ, ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನಾ, ಸದಸ್ಯ ವೆಂಕಟೇಶ, ಜಯಣ್ಣ, ವೀರಭದ್ರಪ್ಪ, ಕವಿತಾ, ಸಾವಿತ್ರಮ್ಮ, ನಾಮನಿರ್ದೇಶನ ಸದಸ್ಯರುಗಳು, ಪೌರಾಯುಕ್ತ ಜಗರೆಡ್ಡಿ, ಸಿಬ್ಬಂದಿ ವರ್ಗ ಹಾಜರಿದ್ದರು.

About The Author

Namma Challakere Local News
error: Content is protected !!