ಚಳ್ಳಕೆರೆ : ಚಿತ್ರದುರ್ಗ ಜಿಲ್ಲೆಯನ್ನು ಸರ್ಕಾರವು ಬರಗಾಲ ಪ್ರದೇಶವೆಂದು ಘೋಷಿಸಿ ಶೇಂಗಾ, ಈರುಳ್ಳಿ,
ತೊಗರಿಗೆ ಬೆಳೆನಷ್ಟ ಪರಿಹಾರವನ್ನು ಕೊಡಿಸಿ ಬೆಳೆವಿಮೆಯನ್ನು ಮಂಜೂರು ಮಾಡಿಸಿ ರೈತರ
ಬ್ಯಾಂಕ್ ಖಾತೆಗೆ ಜಮಾ ಮಾಡಲು ಮತ್ತು ರೈತರ ಸಾಲ ಮನ್ನ ಮಾಡಲು ಕೇಂದ್ರ ಮತ್ತು ರಾಜ್ಯ
ಸರ್ಕಾರಕ್ಕೆ ಒತ್ತಾಯಿಸಿ ಚಳ್ಳಕೆರೆ ತಾಲೂಕು ಕಛೇರಿಯ ಮುಂದೆ ನೂರಾರು ರೈತರು ಧರಣಿ ಮಾಡುವ ಮೂಲಕ ಸರಕಾರವನ್ನು ಒತ್ತಾಯಿಸಿದರು.
ಇನ್ನೂ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಉಪಾಧ್ಯಕ್ಷ ಕೆ.ಪಿ.ಭೂತಯ್ಯ ಮಾಧ್ಯಮದೊಟ್ಟಿಗೆ ಮಾತನಾಡಿ, ಚಿತ್ರದುರ್ಗ ಜಿಲ್ಲೆಯಲ್ಲಿ ಸುಮಾರು 10ವರ್ಷಗಳಿಂದ ಅನಾವೃಷ್ಠಿ ಮತ್ತು
8ವರ್ಷಗಳಿಂದ ಅತಿವೃಷ್ಠಿ ಎಂದು ಸರ್ಕಾರವು ಘೋಷಣೆ ಮಾಡಿರುತ್ತದೆ. 2025-26ನೇ ಸಾಲಿನಲ್ಲಿ ಶೇಂಗಾ, ಈರುಳ್ಳಿ, ತೊಗರಿ
ಬೆಳೆಗಳು ಒಣಗಿ ಹೋಗಿ ಕರೇಜೇಡಿ ಮತ್ತು ಬೆಂಕಿ ರೋಗಕ್ಕೆ ತುತ್ತಾಗಿರುತ್ತವೆ. ರೈತರು ಹಾಕಿರುವ ಬಂಡವಾಳವೂ ಸಿಗದೆ ತುಂಬಾ
ಕೆಳಗಿನಂತೆ ರೈತರು
ತೊಂದರೆಯಲ್ಲಿರುತ್ತಾರೆ.
ಈ ಜಿಲ್ಲೆಯಲ್ಲಿ ಅತೀ ಕಡಿಮೆ ಮಳೆ ಬೀಳುತ್ತಿದ್ದು, ಇದು ಬಯಲುಸೀಮೆ ಜಿಲ್ಲೆಯಾದ್ದರಿಂದ ಯಾವುದೇ
ಬೆಳೆ ರೈತನ ಕೈಗೆ ಸಿಗದೆ ಪ್ರತಿ ವರ್ಷ ಬೆಳೆನಷ್ಟ ಅನುಭವಿಸುತ್ತಿದ್ದಾರೆ. ಆದ ಪ್ರಯುಕ್ತ ಈ
ಒತ್ತಾಯಿಸುತ್ತಿರುವುದೇನೆಂದರೆ,
1] ರೈತರು ಬಿತ್ತಿದ ಶೇಂಗಾ, ತೊಗರಿ ಬೆಳೆಗೆ ಹೆಕ್ಟೇರ್‌ಗೆ 50ಸಾವಿರ ರೂಪಾಯಿಗಳ ಪರಿಹಾರವನ್ನು ನೀಡುವುದು.
2] ಈರುಳ್ಳಿ ಬಿತ್ತಿದ ರೈತರಿಗೆ ಮಾರುಕಟ್ಟೆಯಲ್ಲಿ ವೈಜ್ಞಾನಿಕವಾದ ಬೆಲೆ ಸಿಗದೆ ರೈತರು ಲಕ್ಷಾಂತರ ರೂಪಾಯಿಗಳನ್ನು ಸಾಲ ಮಾಡಿ
ವೆಚ್ಚ ಮಾಡಿರುತ್ತಾರೆ. ಆದ್ದರಿಂದ ಈರುಳ್ಳಿ ಬೆಳೆಗಾರರಿಗೆ ಹೆಕ್ಟೇರ್‌ಗೆ ಒಂದು ಲಕ್ಷ ರೂಪಾಯಿಗಳ ಪರಿಹಾರವನ್ನು ಕೊಡುವುದು.
3] ರೈತರು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಮಾಡಿದ ಕೃಷಿ ಸಾಲಗಳನ್ನು ಸರ್ಕಾರಗಳು ಮನ್ನಾ ಮಾಡಬೇಕು.
4] ಸಾಲಕೊಟ್ಟ ಬ್ಯಾಂಕುಗಳು ರೈತರಿಗೆ ಉತ್ತಮ ಮಳೆ ಬಂದು ಬೆಳೆ ಇಳುವರಿ ಬರುವವರೆಗೂ ಸಾಲ ವಸೂಲಿ ಮಾಡಬಾರದು.
5] ಚಿತ್ರದುರ್ಗ ಜಿಲ್ಲೆಯನ್ನು ಶಾಶ್ವತ ಬರಗಾಲ ಪೀಡಿತ ಪ್ರದೇಶವೆಂದು ಘೋಷಣೆ ಮಾಡಿ ಬೆಳೆ ವಿಮೆ ಪಾವತಿ ಮಾಡಿದ ರೈತರಿಗೆ
ವಿಮೆಯನ್ನು ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಎಂಬೆಲ್ಲ ಬೇಡಿಕೆಗಳನ್ನು ಇಟ್ಟು ಒತ್ತಾಯಿಸಿದರು.
ಇದೇ ಸಂಧರ್ಭದಲ್ಲಿ ಧರಣಿ ಸ್ಥಳಕ್ಕೆ ತಹಶಿಲ್ದಾರ್ ರೇಹಾನ್ ಪಾಷ, ಕೃಷಿ ಇಲಾಖೆ ಅಧಿಕಾರಿಗಳು, ತೋಟಗಾರಿಕೆ ಅಧಿಕಾರಿಗಳು, ಲೀಡ್ ಬ್ಯಾಂಕ್ ಮ್ಯಾನೇಜರ್ ಇತರರು ಪಾಲ್ಗೊಂಡು ಮನವಿ ಸ್ವೀಕರಿಸಿದರು.

