filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 37;

ರೈತ ಮುಖಂಡನ ಸುಳ್ಳು ಆರೋಪಕ್ಕೆ : ಅಬ್ಬೆನಹಳ್ಳಿ ಗ್ರಾಮ ಪಂಚಾಯತಿ ಅಧ್ಯಕ್ಷ, ಸದಸ್ಯರು ಆಕ್ರೋಶ..!

ಚಳ್ಳಕೆರೆ : ರೈತ ಮುಖಂಡರು ಸುಖಾ ಸುಮ್ಮನೆ ಒಂದು ಗ್ರಾಮ ಪಂಚಾಯತಿ ಹೆಸರು ಬಳಸಿಕೊಂಡು ಆರೋಪ ಮಾಡುವುದು ಸರಿಯಲ್ಲ ದಾಖಲೆ ಸಮೆತ ಸಾಭಿತು ಪಡಿಸಿದರೆ ನಾವು ಉತ್ತರ ಕೊಡಲು ಸಿದ್ದರಿದ್ದೆವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷೆ ಪಾಪಮ್ಮ ಹೇಳಿದರು.

ಅವರು ನಗರದ ಪ್ರವಾಸಿ ಮಂದಿರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ರೈತ ಮುಖಂಡ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆರೋಪಕ್ಕೆ ಪ್ರತ್ಯರೋಪವಾಗಿ ಗ್ರಾಮ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಉಪಾಧ್ಯಕ್ಷರಾದ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ರವರು ಚಳ್ಳಕೆರೆ ತಾಲೂಕಿನ ಅಬ್ಬೆನಹಳ್ಳಿ ಗ್ರಾಮ ಪಂಚಾಯತಿಯಲ್ಲಿ ಯಾವುದೇ ಹಗರಣ ಮಾಡಿಲ್ಲ, ಇನ್ನೂ ಯಾವುದೇ ಪುರಾವೆ ಇಲ್ಲದೆ, ಸುಖಾ ಸುಮ್ಮನೆ ಗ್ರಾಮ ಪಂಚಾಯಿತಿಯ ಹೆಸರು ಬಳಸಿಕೊಂಡು
ತಾಲ್ಲೂಕಿಗೆ ಪ್ರಥಮ ಸ್ಥಾನದಲ್ಲಿ ಅಭಿವೃದ್ಧಿ ಮಾಡಿರುವ ಈ ಗ್ರಾಮ ಪಂಚಾಯತಿಯನ್ನು ಸುಳ್ಳು ಆರೋಪ ಮಾಡುವುದು ಸರಿಯಲ್ಲ ಇನ್ನೂ ಇದೇ ರೀತಿ ಮುಂದುವರೆದರೆ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುತ್ತದೆ ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಇದೇ ಸಂಧರ್ಭದಲ್ಲಿ ಅಧ್ಯಕ್ಷೆ ಪಾಪಮ್ಮ, ಉಪಾಧ್ಯಕ್ಷೆ ಅನಿತಾ, ಸದಸ್ಯ ಶಂಕರಸ್ವಾಮಿ, ಪಡ್ಲುಬೋರಯ್ಯ, ಶಂಕರಗೌಡ, ಸಣ್ಣ ಬೋರಯ್ಯ, ಗಜೇಂದ್ರ, ಸಣ್ಣ ಪಾಲಯ್ಯ, ಮುಖಂಡ ಆನಂದಪ್ಪ, ರೇವಣ್ಣ, ದುರುಗೇಶ್, ಜಯಣ್ಣ, ಇತರರು ಇದ್ದರು.

About The Author

Namma Challakere Local News
error: Content is protected !!