ಚಳ್ಳಕೆರೆ :
ತಾಲ್ಲೂಕಿನ ಗೊರಲಕಟ್ಟೆ ಗ್ರಾಮದ ಚಂದ್ರಪ್ಪ (68) ಇವರು ಅನಾರೋಗ್ಯದಿಂದ ಶನಿವಾರ ಮೃತರಾಗಿದ್ದಾರೆ. ಇವರಿಗೆ ಎರಡು ಗಂಡು, ಇಬ್ಬರು ಹೆಣ್ಣುಮಕ್ಕಳು ಇದ್ದಾರೆ. ಇವರ ಅಂತ್ಯಕ್ರಿಯೆಯನ್ನು ಗ್ರಾಮದಲ್ಲಿ ಶನಿವಾರ ನೆರವೇರಿಸಲಾಯಿತು. ಶ್ರೀಯುತರು ಹಿರಿಯೂರು ತಾಲೂಕು ಹರ್ತಿಕೋಟೆ ಗ್ರಾಮದ ಶ್ರೀ ಕೆಂಚಲಿಂಗೇಶ್ವರ ಸ್ವಾಮಿ ದೇವಸ್ಥಾನ ಸಮಿತಿಯಲ್ಲಿ ಕಳೆದ ಸುಮಾರು 15 ವರ್ಷಗಳಿಂದ ನಿರ್ದೇಶಕರಾಗಿ ಅಪಾರ ಸೇವೆ ಸಲ್ಲಿಸಿದ್ದಾರೆ.
ಇವರ ಸೇವಾ ಅವಧಿಯಲ್ಲಿ ನೂತನ ದೇಗುಲ ನಿರ್ಮಾಣಕ್ಕೆ ಶ್ರಮಿಸಿದ್ದಾರೆ ಇವರಿಗೆ ದೇವಸ್ಥಾನ ಸಮಿತಿಯಿಂದ ಕಮಿಟಿ ವತಿಯಿಂದ ಸಂತಾಪ ಸೂಚಿಸಲಾಗಿದೆ.

About The Author

Namma Challakere Local News
error: Content is protected !!