ಚಿತ್ರದುರ್ಗ: ಕತ್ತಿ ಬಂಧಿಸಿ ಜಾತಿ ನಿಂದನೆ ಪ್ರಕರಣ
ದಾಖಲಿಸಿ
ನಾಯಕರನ್ನು ಅವಾಚ್ಯವಾಗಿ ನಿಂದಿಸಿರುವ ರಮೇಶ್ ಕತ್ತಿಯನ್ನು
ಕೂಡಲೇ ಬಂಧಿಸಿ, ಅವರ ಮೇಲೆ ಜಾತಿ ನಿಂದನೆ ಪ್ರಕರಣ
ದಾಖಲಿಸಬೇಕೆಂದು ನಾಯಕ ಸಮಾಜದ ಜಿಲ್ಲಾಧ್ಯಕ್ಷ ಹೆಚ್ ಜೆ
ಕೃಷ್ಣಮೂರ್ತಿ ಒತ್ತಾಯಿಸಿದ್ದಾರೆ. ಚಿತ್ರದುರ್ಗದಲ್ಲಿ ಸೋಮವಾರ
ಮಾತನಾಡಿದ ಅವರು, ಯಾವುದೇ ನಾಯಕರು ಕತ್ತಿ ನಿಂದಿಸಿದಂತೆ
ಇಲ್ಲ. ಯಾವುದೇ ಜಾತಿಯವರನ್ನು ಅವಹೇಳನಕಾರಿಯಾಗಿ
ಮಾತಾಡಬಾರದು. ಇವರ ವಿರುದ್ಧ ಎಫ್‌ಐಆರ್ ಮಾಡದಿದ್ದರೆ,
ಹೋರಾಟ ಉಗ್ರವಾಗಿರುತ್ತದೆ ಎಂದು ಎಚ್ಚರಿಸಿದ್ದಾರೆ.

