ದೀಪಾವಳಿ: ತುಂತುರು ಮಳೆಯ ಸಿಂಚನದ ನಡುವೆ ಸಡಗರ ಸಂಭ್ರಮದಿಂದ ಜರುಗಿದ ನೋಪಿ ಗೌರಿ ಹಬ್ಬ
ಚಳ್ಳಕೆರೆ: ತಾಲ್ಲೂಕಿನ ಮೈಲನಹಳ್ಳಿಯಲ್ಲಿ ದೀಪಾವಳಿ ಹಬ್ಬದ ನಿಮಿತ್ತ ಹಲವು ಮನೆಗಳಲ್ಲಿ ನೋಪಿ ಗೌರಿಯನ್ನ ಪ್ರತಿಷ್ಠಾಪಿಸಿ ಸಂಭ್ರಮದಿಂದ ಹಬ್ಬವನ್ನ ಆಚರಿಸಿದರು. ಅಮಾವಾಸ್ಯೆಯ ಮೊದಲ ದಿನವಾದ ಸೋಮವಾರ ಸಂಜೆ ತಳೀರು-ತೋರಣ, ಚೆಂಡು ಹೂಗಳಿಂದ ಅಲಂಕೃತಗೊಂಡ ಮಂಟಪದಲ್ಲಿ ನೊಂಪಿ ಗೌರಿಯ ಕಳಸವನ್ನು ಒಡವೆ ವಸ್ತ್ರಗಳು, ವಿಶೇಷ ಹೂವುಗಳಿಂದ ಅಲಂಕರಿಸಿ, ಪ್ರತಿಷ್ಠಾಪಿಸಿ, ಕುಟುಂಬ ಸದಸ್ಯರೆಲ್ಲರೂ ಸೇರಿ ಪೂಜಿಸಿದರು. ನಂತರ ಗುರುಗಳ ಪಾದಪೂಜೆಯನ್ನು ನೆರವೇರಿಸಿದರು. ಹಬ್ಬದ ಎರಡನೇ ದಿನವಾದ ಮಂಗಳವಾರ ಮುಂಜಾನೆ ಕೇದಾರೇಶ್ವರ ವ್ರತ, ಜಗನ್ಮಾಥೆ ದೇವಿರಮ್ಮ ದೇವಿಯ ಆರಾಧನೆ ಪ್ರಯುಕ್ತ, ಚಿಗಳಿ-ತಂಬಿಟ್ಟುಗಳ ಮಹಾ ಆರತಿ, ತುಂಬೆ ಹೂವಿನ ಅಲಂಕಾರ ಮಂಗಲಾರುತಿ ನಡೆಯಿತು. ಬುಧವಾರ ಸಂಜೆ ನಿರಂತರವಾಗಿ ಸುರಿದ ತುಂತುರು ಮಳೆ ನಡುವೆಯೂ ಗ್ರಾಮದ ಚನ್ನವೀರಪ್ಪ, ಗೌಡ್ರು ಬಸವರಾಜಪ್ಪ, ಬಸೆಟಪ್ಪರ ತಿಪ್ಪೇಸ್ವಾಮಿ ಯವರ ಮನೆಗಳಲ್ಲಿ ಪ್ರತಿಷ್ಠಾಪಿಸಲಾಗಿದ್ದ ನೋಪಿಗೌರಿಯನ್ನ ಸರಳ & ಸಡಗರದಿಂದ ಸಾಮೂಹಿಕವಾಗಿ ಮೆರವಣಿಗೆ ಮೂಲಕ ಗ್ರಾಮದ ಹೊರವಲಯದಲ್ಲಿ ಹರಿಯುವ ವೇದಾವತಿ ನದಿಯಲ್ಲಿ ಮಹಾ ಮಂಗಳಾರತಿ ನಡೆಸಿ ವಿಸರ್ಜನೆ ಮಾಡಲಾಯಿತು. ಸರಳ ಮೆರವಣಿಗೆಯಲ್ಲಿ ಮೈಲನಹಳ್ಳಿ ದಿನೇಶ್, ಅಶೋಕ್, ಸತೀಶ್, ಗೌಡ್ರು ಕರಿಬಸವರಾಜ್, ಭರತ್ ಪಟೇಲ್, ಬಸವರಾಜ್, ತ್ಯಾಗರಾಜ್, ಗೌಡ್ರು ತಿಪ್ಪೇಸ್ವಾಮಿ, ಗೌರೀಶ್, ಚಲ್ಮೈಶ್, ಯೋಗೀಶ್, ನವೀನ್, ದರ್ಶನ್, ನಿಖಿಲ್, ನಂದೀಶ್, ಮನೋಜ್, ಪ್ರಶಾಂತ್, ಬಸವರಾಜ್ ಶ್ವೇತ , ಕಲ್ಪನಾ, ಭಾಗ್ಯಮ್ಮ , ವಾಣಿ ಸೇರಿದಂತೆ ಗಂಡು ಹೆಣ್ಣುಮಕ್ಕಳು ಸಮನಾಗಿ ಭಾಗವಹಿಸಿದರು.

