ಚಳ್ಳಕೆರೆ :
ರೈತರ ಪಂಪ್‌ಸೆಟ್‌ಗಳಿಗೆ ಸರಬರಾಜು ಮಾಡುತ್ತಿರುವ ಬೆಸ್ಕಾಂ 11ಕೆ.ವಿ. ಮತ್ತು ಎಲ್.ಟಿ. ವಿದ್ಯುತ್ ಲೈನ್‌ಗಳಲ್ಲಿ ಮರ, ಗಿಡ,
ಬಳ್ಳಿ ಬೆಳೆದು ಕಾಡು ಸೃಷಿಯಾಗಿದ್ದು ಇದರಿಂದ ವಿದ್ಯುತ್ ಲೈನ್‌ಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ಏರುಪೇರಾಗಿ ವೋಲ್ವೆಜ್ ಗಿಡ ಮರಗಳಲ್ಲಿ
ಕಡಿತವಾಗಿ ಟಿ.ಸಿ. ಮತ್ತು ರೈತರ ಕೃಷಿ ಪಂಪ್‌ಸೆಟ್‌ಗಳು ಸುಡುತ್ತಿವೆ.

ಇದಕ್ಕೆ ಕಾರಣ ರೈತರೇ ಎಂದು ಅಧಿಕಾರಿಗಳು ಆರೋಪ ಹೋರಿಸಿ
ಕೈಚೆಲ್ಲುತ್ತಾರೆ, ಇದರಿ೦ದ ಬೆಸ್ಕಾಂ ಹಾಗೂ ರೈತರಿಗೆ ಸಾವಿರಾರು ಕೋಟಿ ಬೆಳೆ ನಷ್ಟವಾಗುತ್ತಿದೆ ಮತ್ತು ಅನಧಿಕೃತವಾಗಿ ಬೀದಿ ದೀಪಗಳು
ಸಾವಿರಾರು ಸಂಖ್ಯೆಯಲ್ಲಿ ಉರಿಯುತ್ತಿದ್ದರೂ ಬೆಸ್ಕಾಂ ಜಾಗೃತದಳದ ಅಧಿಕಾರಿಗಳು ಕ್ರಮ ವಹಿಸದೇ ಕಛೇರಿಯಲ್ಲಿ ನಿದ್ರೆಗೆ ಜಾರಿದ್ದು ಇವರ
ನಿರ್ಲಕ್ಷ್ಯದಿಂದ ರಾಷ್ಟ್ರೀಯ ಸಂಪತ್ತು ವಿದ್ಯುತ್ ಸಾವಿರಾರು ಕೋಟಿ ನಷ್ಟವಾಗುತ್ತಿದೆ.

ನಷ್ಟವಾಗುತ್ತಿರುವ ವಿದ್ಯುತ್ ಉಳಿಸಿ ರೈತರ ಕೃಷಿ
ಪಂಪ್‌ಸೆಟ್‌ಗಳಿಗೆ ನಿರಂತರ 24 ಗಂಟೆ ಕೊಡಬೇಕೆಂದು ಒತ್ತಾಯಿಸಲು ನಿದ್ರೆಗೆ ಜಾರಿರುವ ಬೆಸ್ಕಾಂ ಅಧಿಕಾರಿಗಳನ್ನು ಎಚ್ಚರಿಸಲು
ತಳಕು ಬೆಸ್ಕಾಂ ಎ.ಇ.ಇ.ಕಛೇರಿ ಮುಂದೆ ದಿನಾಂಕ 16-01-2026 ನೇಶುಕ್ರವಾರ
ರೈತರ ಬೃಹತ್ ತಮಟೆ ಚಳುವಳಿ ನಡೆಸಲಾಗುತ್ತದೆ ಎಂದು

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯ ಕಾರ್ಯಾಧ್ಯಕ್ಷ
ಬೇಡರೆಡ್ಡಿಹಳ್ಳಿ ಬಸವರೆಡ್ಡಿ ತಿಳಿಸಿದ್ದಾರೆ.

ಬೆಸ್ಕಾಂ ದಾವಣಗೆರೆ ವಲಯದ ಅಧೀಕ್ಷಕರು ಮತ್ತು ಹಿರಿಯೂರು ವಿಭಾಗದ ಕಾರ್ಯಪಾಲಕ ಅಭಿಯಂತರರು ಧರಣಿ ಸ್ಥಳಕ್ಕೆ ಭೇಟಿ
ನೀಡಿ ರೈತರ ಕುಂದುಕೊರತೆಗಳು ಮತ್ತು ಎ.ಇ.ಇ. ಕಛೇರಿಯಿಂದ ಈ ವರೆವಿಗೂ ಆಗಿರುವ ಕಾಮಗಾರಿಗಳನ್ನು ತನಿಖೆ ಮಾಡಬೇಕೆಂದು
ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!