ಸಂಚಾರಿ ನಿಯಮಗಳ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಇದ್ದರೂ ಸಹ ಪಾಲನೆ ಮಾಡುತ್ತಿಲ್ಲ; ನ್ಯಾ. ಹೆಚ್ ಆರ್ ಹೇಮಾ.

ಚಳ್ಳಕೆರೆ: ಸಂಚಾರಿ ನಿಯಮಗಳ ಬಗ್ಗೆ ಯುವಜನತೆಯಲ್ಲಿ ಜಾಗೃತಿ ಇದ್ದರೂ ಸಹ ಪಾಲನೆ ಮಾಡದಿರುವುದು ವಿಷಾದ ಸಂಗತಿಯಾಗಿದೆ.

ವಾಹನ ಸವಾರರ ನಿರ್ಲಕ್ಷದಿಂದಾಗಿ ಇಂದು ಅನೇಕ ಅಪಘಾತಗಳು ಸಂಭವಿಸುತ್ತಿದ್ದು ವಾಹನ ಚಲಾವಣೆ ವೇಳೆ ಹೆಚ್ಚು ಜಾಗೃತಿ ವಹಿಸಬೇಕು ಎಂದು ಪ್ರಧಾನ ಸಿವಿಲ್ ನ್ಯಾಯಾಧೀಶೆ ಹೆಚ್.ಆರ್ ಹೇಮ ತಿಳಿಸಿದರು.

ನಗರದ ವಾರಿಯರ್ಸ್ ಶಾಲೆಯಲ್ಲಿ ಹಮ್ಮಿಕೊಂಡಿದ್ದ 37ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ವಾಹನ ಸವಾರರಿಗೆ ರಸ್ತೆ ಸುರಕ್ಷತಾ ನಿಯಮಗಳು ತಿಳಿದಿರಬೇಕು ಕೇಂದ್ರ ಸರ್ಕಾರ ದಂಡದ ಪ್ರಮಾಣವನ್ನು ಹೆಚ್ಚಿಸಿದ್ದರು ಸಹ ವಾಹನ ಸವಾರರು ಹೆಚ್ಚು ಕಾಳಜಿ ವಹಿಸದೆ ವಾಹನ ಚಲಾವಣೆ ಮಾಡುತ್ತಿದ್ದಾರೆ ಅಪಘಾತಗಳು ಸಂಭವಿಸಿದಾಗ ವಿಮೆ ಪಾವತಿಯಾಗುವುದಿಲ್ಲ ಇದರಿಂದ ತಮ್ಮನ್ನು ನಂಬಿದ ಕುಟುಂಬದವರಿಗೆ ಅನ್ಯಾಯವಾಗುತ್ತದೆ ಮೃತಪಟ್ಟ ಜೀವಗಳನ್ನು ಮತ್ತೆ ವಾಪಸ್ ತರಲು ಸಾಧ್ಯವಿಲ್ಲ ಆದ್ದರಿಂದ ವಾಹನ ಚಲಾವಣೆ ವೇಳೆ ಹೆಲ್ಮೆಟ್ ಧರಿಸಬೇಕು ಚಾಲನ ಪರವಾನಗಿ ಜೀವವಿಮೆ ಸೇರಿದಂತೆ ಎಲ್ಲಾ ದಾಖಲೆಗಳನ್ನು ಸೂಕ್ತ ರೀತಿಯಲ್ಲಿ ಸಂಗ್ರಹಿಸಿ ಇಟ್ಟುಕೊಳ್ಳುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ಸಾರಬೇಕು ಎಂದು ಕರೆ ನೀಡಿದರು.

ಅಪರ ಸಿವಿಲ್ ನ್ಯಾಯಾಧೀಶ ಬಿ.ಆರ್ ಪುನೀತ್ ಮಾತನಾಡಿ ಯುವ ಜನತೆ ದ್ವಿಚಕ್ರ ವಾಹನಗಳಲ್ಲಿ ಸಂಚರಿಸುವಾಗ ಅತ್ಯಂತ ಆತ್ಮವಿಶ್ವಾಸದಿಂದ ವಾಹನವನ್ನು ವೇಗವಾಗಿ ಚಲಾಯಿಸುತ್ತಾರೆ ಅಜಾಗರೂಕತೆಯಿಂದ ವಾಹನ ಚಲಾಯಿಸಿದರೆ ಹೆಚ್ಚು ಜೀವಗಳು ಬಲಿಯಾಗುತ್ತಿವೆ ತನಗೆ ಉತ್ತಮವಾಗಿ ಗಾಡಿ ಓಡಿಸಬಲ್ಲೆ ಎಂಬ ನಿರ್ಲಕ್ಷವೇ ಇಂದು ಅನೇಕ ಅಪಘಾತಗಳಿಗೆ ಕಾರಣವಾಗಿದೆ ಸಂಚಾರಿ ನಿಯಮಗಳನ್ನು ನಾಗರಿಕರು ಪಾಲನೆ ಮಾಡಲಿ ಎಂಬ ಸದುದೇಶದಿಂದ ಪೊಲೀಸರು ದಂಡ ವಿಧಿಸುವ ಕಾರ್ಯ ಮಾಡುತ್ತಾರೆ ಅಪಘಾತದಲ್ಲಿ ವ್ಯಕ್ತಿಯ ಜೀವ ಹೋದರೆ ಮತ್ತೆ ತರಲು ಸಾಧ್ಯವಿಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅಪಘಾತಗಳ ಬಗ್ಗೆ ಅನೇಕ ವಿಡಿಯೋಗಳು ಹರಿದಾಡುತ್ತವೆ ಮುಂದಿನ ದಿನಗಳಲ್ಲಾದರೂ ಯುವಜನತೆ ವಾಹನ ಚಲಾವಣೆ ವೇಳೆ ಹೆಚ್ಚು ಜಾಗೃತಿ ವಹಿಸಲಿ ಎಂದು ಕರೆ ನೀಡಿದರು. ಚಿತ್ರದುರ್ಗ ಪ್ರದೇಶ ಸಾರಿಗೆ ಇಲಾಖೆ ಅಧಿಕಾರಿ ಅಧಿಕಾರಿ ಭರತ್ ಎಂ.ಕಾಳೆ ಸಿಂಧೆ ಮಾತನಾಡಿ,ರಸ್ತೆ ಸುರಕ್ಷತೆ ನಿಯಮಗಳನ್ನ ಪ್ರತಿಯೊಬ್ಬರು ಪಾಲಿಸಬೇಕು ಮುಖ್ಯವಾಗಿ ರಸ್ತೆಗಳಲ್ಲಿ ಸೂಚನ ಫಲಕಗಳನ್ನ ಅಳವಡಿಸಿಲಾಗಿರುತ್ತದೆ. ಸೂಚನ ಫಲಕದ ನಿಯಮಗಳನ್ನ ಸರಿಯಾಗಿ ಪಾಲಿಸಿದ್ದೆ ಆದರೆ ಗಣನಿಯವಾಗಿ ಅಪಘಾತ ಗಳು ಕಡಿಮೆ ಯಾಗುತ್ತವೆ
ವಾಹನ ಅವಾರರು ಕಡ್ಡಾಯವಾಗಿ ರಸ್ತೆ ನಿಯಮಗಳನ್ನ ಪಾಲಿಸಬೇಕು ಎಂದರು ..

ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತಾ ನಿಯಮಗಳನ್ನು ಕುರಿತು ಬಿತ್ತಿ ಪತ್ರಗಳನ್ನು ಬಿಡುಗಡೆಗೊಳಿಸಿ ಜಾಗೃತಿ ಮೂಡಿಸಲಾಯಿತು

ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷ ಅಶ್ವತ ನಾಯಕ ಉಪಾಧ್ಯಕ್ಷೆ ಶ್ಯಾಮಲಾ ಪರಮೇಶ್ವರಪ್ಪ ಬಸವರಾಜೇಶ್ವರಿ ಡಾ. ಕಾಶಿ ಪಿಎಸ್ಐ ಶಿವರಾಜ್ ಸಾರಿಗೆ ಇಲಾಖೆ ಇನ್ಸ್ಪೆಕ್ಟರ್ ರಾಜೇಶ್ ‌. ವಾರಿಯರ್ಸ್ ಶಾಲೆಯ ಕಾರ್ಯದರ್ಶಿ ಸುಭಾಷ್ ಲೋಕನಾಥ ಶಾಲೆಯ ಸಿಬ್ಬಂದಿ ವರ್ಗ ಪೋಲೀಸ್ ಸಿಬ್ಬಂದಿ ಸಾರಿಗೆ‌‌‌‌‌‌ ಇಲಾಖೆ ಸಿಬ್ಬಂದಿ ಗಳು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!