ಚಳ್ಳಕೆರೆ :
ಚಿತ್ರದುರ್ಗ: ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸಿ
ಚಿತ್ರದುರ್ಗದ ಪ್ರಮುಖ ಬೆಳೆಗಳಲ್ಲೊಂದಾದ ಈರುಳ್ಳಿ ಬೆಳೆಯ
ಬೆಲೆ ಕುಸಿದಿದ್ದು, ರೈತರು ಕಂಗಾಲಾಗಿದ್ದಾರೆ. ಕಲ್ಲೇನಹಳ್ಳಿ ಮತ್ತು
ಹಳೆ ಕಲ್ಲೇನಹಳ್ಳಿ ಸುತ್ತಮುತ್ತಲಿನ ನೂರಾರು ಗ್ರಾಮಗಳಲ್ಲಿ,
ರೈತರು ಈರುಳ್ಳಿ ಬೆಳೆದಿದ್ದಾರೆ. ಆದರೆ ಬೆಲೆ ಕುಸಿದಿದ್ದು, ಕೈ ಗೆ ಬಂದ
ತುತ್ತು ಬಾಯಿಗೆ ಬರದಂತಾಗಿದೆ. ಲಾಭದ ನಿರೀಕ್ಷೆಯಲ್ಲಿದ್ದ ನಮಗೆ
ಹಾಕಿದ ಬಂಡವಾಳಕ್ಕೂ ಕುತ್ತು ಬಂದಿದೆ. ಆದ್ದರಿಂದ ಸರ್ಕಾರ
ಈರುಳ್ಳಿ ಬೆಳೆಗೆ ಬೆಂಬಲ ಬೆಲೆ ಘೋಷಿಸಬೇಕು ಎಂದು ರೈತರು
ಆಗ್ರಹಿಸಿದ್ದಾರೆ.

