ಚಳ್ಳಕೆರೆ : ನಗರದ ಕಾಟಪ್ಪನಹಟ್ಟಿ ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕಾಡುಗೊಲ್ಲ ಸಮುದಾಯದ ಮಳ್ಳಿಗ ವಂಶಸ್ಥರು ಪ್ರತಿ ವರ್ಷ ಎರಡನೇ ಶ್ರಾವಣ ವಾರದಲ್ಲಿ ವಿಶೇಷವಾಗಿ ನಾಗರಪಂಚಮಿಯನ್ನು ಆಚರಣೆ ಮಾಡುತ್ತಾರೆ.  ಈ ಸಮುದಾಯದ ವಿಶೇಷತೆ ಎಂದರೆ ನಾಗರ ಕಲ್ಲು ಮತ್ತು ಹುತ್ತಗಳಿಗೆ ಹಾಲು ಎರೆಯುವ ಬದಲು ಅನ್ನ ಹುಣಸೆಹುಳಿಯಿಂದ ತಯಾರು ಮಾಡಿದ  ಸಾಂಬರುನ್ನವನ್ನು ನೈವೇದ್ಯ ಮಾಡುತ್ತಾರೆ. ಎರಡನೇ ಸೋಮವಾರ ಮುಂಜಾನೆಯಿಂದನೆ ಆಚರಣೆಯನ್ನು ಪ್ರಾರಂಭ ಮಾಡುವ ಇವರು ಚಳ್ಳಕೆರೆ ನಗರದಿಂದ 37 ಕಿ.ಮೀ ದೂರವಿರುವ ಪರುಶುರಾಮಪುರ ಹೋಬಳಿಯ ದೊಡ್ಡಚೆಲ್ಲೂರು ಕಾವಲಿಗೆ ಕಾಲನಡಿಗೆಯಲ್ಲಿ ತೆರಳುತ್ತಾರೆ.

ಅಲ್ಲಿರುವ ನಾಗರಕಲ್ಲುಗಳಿಗೆ ಪೂಜೆ ಸಲ್ಲಿಸುವ ಪದ್ದತಿ ಇಂದಿಗೂ ನಡೆದುಕೊಂಡು ಬಂದಿದೆ. ಸುಮಾರು 50 ಕ್ಕೂ ಹೆಚ್ಚು ಕುಟುಂಬಂಸ್ಥರು ಏಕಕಾಲಕ್ಕೆ ಪೂಜೆ ಸಲ್ಲಿಸುತ್ತಾರೆ. 
ಈ ದಿನ ಮಕ್ಕಳಿಂದ ಎಲ್ಲಾ ವಯಸ್ಸಿವರು ಉಪವಾಸ ವ್ರತ ಮಾಡಿ ಸಂಜೆ ಪೂಜೆಯ ನಂತರ ವ್ರತ ಕೈಬಿಡಲಾಗುತ್ತದೆ. ಹರಕೆಗಳನ್ನು ಮಾಡಿಕೊಂಡು ತಮ್ಮ ಇಷ್ಟಾರ್ಥಗಳನ್ನು ಈಡೇರಿಸುವಂತೆ ಬೇಡಿಕೊಳ್ಳುತ್ತಾರೆ. ಕಂಕಣ ಭಾಗ್ಯ, ಸಂತಾನ, ಉದ್ಯೋಗ, ವ್ಯಾಪಾರದಲ್ಲಿ ಹೆಚ್ಚಳ ಹೀಗೆ ಅನೇಕ ಬೇಡಿಕೆಗಳನ್ನು ಬೇಡಿಕೊಳ್ಳುತ್ತಾರೆ. ಬೇಡಿಕೆ ಈಡೇರಿದ ನಂತರ ಬೆಳ್ಳಿ ಆಭರಣ, ಅನ್ನ ಸಂತರ್ಪಣೆ, ಇನ್ನೂ ಮಕ್ಕಳ ಮುಡಿ ಕೊಡುವ ಮೂಲಕ ಬೇಡಿಕೆ ತಿರಿಸುತ್ತಾರೆ. ಇನ್ನೂ ಕಾವಲಿಗೆ ಬರಲು ಆಗದ ಭಕ್ತರು ತಮ್ಮ ತಮ್ಮ ಮನೆಯಲ್ಲೆ ಇದ್ದು ರಾತ್ರಿ 7 ರ ನಂತರ ವ್ರತವನ್ನು ಕೈಬಿಡುತ್ತಾರೆ.

ಇನ್ನೂ ಸೋಮವಾರ ಬೆಳ್ಳಗೆ ಶ್ರೀರಂಗಸ್ವಾಮಿ ಮತ್ತು ಯತ್ತಪ್ಪಸ್ವಾಮಿ ದೇವಾಲಯದಿಂದ ಹೊರಟವರು ಕಾವಲಿನಲ್ಲಿ ಪೂಜೆ ಸಲ್ಲಿಸಿ ರಾತ್ರಿ‌ ದಾಸಪ್ಪ ಪೂಜಾರಿಗಳು ದ್ಯಾವರಹಳ್ಳಿ ಬಳಿಯ ಭೂತಪ್ಪನ ಗಡಿ ಬಳಿ ತಂಗುತ್ತಾರೆ. ಮಂಗಳವಾರ ಮುಂಜಾನೆ ಹೊರಟು ದೊಡ್ಡರಿ ಬಳಿ ಎದರು ಪರುವು ಮಾಡುತ್ತಾರೆ. ಇಲ್ಲಿ ಅನ್ನ ಮತ್ತು ಸೋಪ್ಪಿನ ಸಾಂಬರ್ ನೈವೇದ್ಯ ಮಾಡಿ ಸಂಜೆಗೆ ಮರಳಿ ಗೊಲ್ಲರಹಟ್ಟಿಗೆ ಆಗಮಿಸುತ್ತಾರೆ. ಇನ್ನೂ ಚೆಲ್ಲೂರು ಕಾವಲಿನಲ್ಲಿ ನೀರಿನ ಸಮಸ್ಯೆ ಇದ್ದು ಕಳೆದೈದು ವರ್ಷದಿಂದ ಒಬನಹಳ್ಳಿ ಮಂಜುನಾಥ್ ನೀರಿ ವ್ಯವಸ್ಥೆ ಮಾಡುತ್ತಿರುವುದರಿಂದ ತುಂಬಾ ಅನುಕೂಲವಾಗುತ್ತಿದೆ. ಜನಪ್ರತಿನಿಧಿಗಳು ಭಕ್ತರು ಯಾರದಾರೂ ಶಾಶ್ವತ ನೀರಿನ ವ್ಯವಸ್ಥೆ ಮಾಡಿದ್ರೆ ತುಂಬಾ ಅನುಕೂಲವಾಗುತ್ತದೆ.

ಸುಮಾರು ಏಳೆಂಟು ತಲೆ ಮಾರಿನವರಿಂದು ಈ ಆಚರಣೆ ನಡೆದುಕೊಂಡು ಬರುತ್ತಿರುವ ಪದ್ದತಿ. ಹಿರಿಯರು ಹೇಳುವ ಪ್ರಕಾರ ಪ್ರತಿ ವರ್ಷ ೩೭ ಕಿ.ಮೀ ನಡೆದು ಬರಲು ಆಗುವುದಿಲ್ಲ ಎಂದು ಕರಿ ಕಂಬಳಿಯಲ್ಲಿ ಇಲ್ಲಿ ನೆಲೆಸಿರುವ ನಾಗರ ಕಲ್ಲುಗಳನ್ನು ಚಳ್ಳಕೆರೆ ನಗರದ ಸಮೀಪ ತೆಗೆದು ಪ್ರತಿಷ್ಟಾಪನೆ ಮಾಡುವ ಪ್ರಯತ್ನ ಮಾಡಲು ಮುಂದದಾಗ. ನಾಗರಕಲ್ಲು ಸಮೇತರಾಗಿ ವೇದವತಿ ನದಿಯಲ್ಲಿ ರಾತ್ರಿ ತಂಗಲಾಗಿತಂತೆ. ಮುರುದಿನ ಬೆಳ್ಳಗೆ ಎದ್ದು ನೋಡಿದಾಗ ಆ ನಾಗರಕಲ್ಲು ಮಾಯಾವಾಗಿ ಮತ್ತೆ ಅದೇ ಸ್ಥಳದಲ್ಲಿ ಇದ್ದವು. ಈ ಹಿನ್ನೆಲೆಯಲ್ಲಿ ನಮ್ಮದು ತಪ್ಪಾಯಿತು ಪ್ರತಿವರ್ಷ ಇಲ್ಲಿಗೆ ಬಂದು ಪೂಜೆ ಸಲ್ಲಿಸುತ್ತೆವೆ ಎಂದು ದೇವರಲ್ಲಿ ಕ್ಷೇಮಾಯಾಚಿದ್ದರು ಎಂಬ ಇತಿಹಾಸ ಹಿರಿಯರು ಈಗಲೂ ಹೇಳುತ್ತಾರೆ. ಉದಿಬಾಗಿಲು ಮೂರ್ತಪ್ಪ

ಇನ್ನೂ ಮಳ್ಳಿಗ ವಂಶಸ್ಥರು ಅಲ್ಲದೆ ನೆಂಟರು, ಹೊಸದಾಗಿ ವಿವಾಹ ಆದವರು ಸಹ  ಪೂಜೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸುತ್ತಾರೆ. ರಾಜಣ್ಣ, ರಂಗನಾಥ, ಮಂಜುನಾಥ, ವೀರಭದ್ರಪ್ಪ, ತಿಪ್ಪೇಸ್ವಾಮಿ, ವೀರೇಶ್ ಅಪ್ಪು, ಪೂಜಾರಿ ಸುರೇಶ, ದಾಸಪ್ಪರಾದ ರಂಗಸ್ವಾಮಿ, ತಿಪ್ಪೇಸ್ವಾಮಿ ನೂರಾರು ಭಕ್ತರು ಸೇರಿದ್ದರು.

About The Author

Namma Challakere Local News
error: Content is protected !!