ನಾಯಕನಹಟ್ಟಿ:; ಸಮಾಜಕ್ಕೆ ಉತ್ತಮ ಸಂದೇಶ ಸಾರುವ ಮೂಲಕ ಕವಿಗಳು ಪ್ರೇರಣೆಯಾಗಬೇಕು ಎಂದು ನಾಟಕ ರಚನೆಕಾರ ಮೊಗಲಹಳ್ಳಿ ನಾಗರಾಜ್ ಹೇಳಿದರು.
ಭಾನುವಾರ ನಾಯಕನಹಟ್ಟಿ ಪಟ್ಟಣದ ಮೈರಾಡ ಕಚೇರಿಯಲ್ಲಿ ವಿಜಯನಗರ ಬಳ್ಳಾರಿ, ಚಿತ್ರದುರ್ಗ ಹಾಗೂ ದಾವಣಗೆರೆ ಜಿಲ್ಲೆಗಳ ಸಾಮಾಜಿಕ ನಾಟಕ ರಚನೆಕಾರರ ಸಭೆಯಲ್ಲಿ ಮಾತನಾಡಿದರು. ಪ್ರತಿಯೊಬ್ಬ ರಚನಕಾರರಿಗೆ ನಾಟಕ ಪ್ರದರ್ಶನ ಸಂದರ್ಭದಲ್ಲಿ ಗೌರವ ಕಾಣಿಕೆ ಸಲ್ಲಿಕೆಯಾಗುವಂತಾಗಬೇಕು ಈ ನಿಟ್ಟಿನಲ್ಲಿ ರಾಜ್ಯದ ನಾಟಕ ರಚನಾಕಾರರು ಸಂಘಟನೆಯಾಗಬೇಕಾಗಿದೆ ಎಂದರು.
ಸಂಘಟನಾ ಕಾರ್ಯದರ್ಶಿ, ಬಿಜಿಕೆರೆ ಉಪ್ಪಿ ಮಾತನಾಡಿ,ಜೀವನಕ್ಕೆ ಸಾಮಾಜಿಕ ನಾಟಕಗಳು ಕಲಾವಿದರಿಗೆ ವರದಾನವಾಗಿವೆ ಆದ್ದರಿಂದ ನಾಟಕ ರಚನಕಾರರು ಸಂಘಟಿತರಾಗಿ ಮುಖ್ಯ ವಾಹಿನಿಗೆ ಬರುವಂತಾಗಬೇಕು ಎಂದರು.
ಇದೆ ವೇಳೆಯಲ್ಲಿ ಕರ್ನಾಟಕ ರಾಜ್ಯ ಬರಹಗಾರರು ಹಾಗೂ ಕವಿಗಳ ಸಂಘ ಬೆಂಗಳೂರು. ಕರ್ನಾಟಕ ರಾಜ್ಯ ಉಪಾಧ್ಯಕ್ಷ ಮೊಗಲಹಳ್ಳಿ ನಾಗರಾಜ್. ಅಧ್ಯಕ್ಷ ನಾಗರಾಜ್ ಕೆಳಗಿನ ಕಣಿವೆ. ಕಾರ್ಯದರ್ಶಿ ಗೆದ್ದಯ್ಯಗಳ ಓಬಯ್ಯ ಪೂಜಾರಿಹಳ್ಳಿ. ಸಂಘಟನಾ ಕಾರ್ಯದರ್ಶಿ ಉಪ್ಪಿ ಬಿಜಿಕೆರೆ. ಹಿರಿಯ ಸಂಗೀತ ನಿರ್ದೇಶಕ ಕುಮಾರಸ್ವಾಮಿ ಇಮ್ಡಾಪುರ, ರಾಜಣ್ಣ ತೂಮ್ಮಕ್ಲರಹಳ್ಳಿ, ಕೆ ಓಬಣ್ಣ ಚಿರತಗುಂಡು, ಜಾಗನೂರಹಟ್ಟಿ ಜಯಪ್ರಕಾಶ್, ಮೂಲೇ ಬೋರಯ್ಯನಹಟ್ಟಿ ತಿಪ್ಪೇಸ್ವಾಮಿ, ಮಲ್ಲೂರಹಳ್ಳಿ ಶ್ರೀಧರ್, ನಲಗೇತನಹಟ್ಟಿ ವಕೀಲ ಎಂ.ಬಿ. ಮುತ್ತಯ್ಯ, ಜೋಗಿಹಟ್ಟಿ ಕೆ.ಜಿ. ಮಂಜುನಾಥ್, ಇದ್ದರು.