ಚಳ್ಳಕೆರೆ : ಶಾಲೆಯ ಸರ್ವತೋಮುಖ ಅಭಿವೃದ್ಧಿಗೆ ಶ್ರಮಿಸುವುದರ ಮೂಲಕ ಮಕ್ಕಳ ವ್ಯಾಸಂಗದ ಕಡೆ ಹೆಚ್ಚಿನ ಗಮನಹರಿಸಿ ಶೈಕ್ಷಣಿಕವಾಗಿ ಮುಂದೆ ಬರುವಂತೆ ಶ್ರಮಿಸುವೆ ಎಂದು ನೂತನ ಎಸ್ ಡಿಎಂಸಿ ಅಧ್ಯಕ್ಷೆ ಶಶಿಕಲಾ ಹೇಳಿದರು.
ಅವರು ತಾಲೂಕಿನ ಮನ್ನೆಕೋಟೆ ಗ್ರಾಮದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಅಭಿವೃದ್ಧಿ ಸಮಿತಿಯ ಆಯ್ಕೆಗಾಗಿ ನಡೆಸಿದ ಚುನಾವಣೆಯಲ್ಲಿ ಸರ್ವಾನುಮತದಿಂದ ಎಸ್ ಡಿಎಂಸಿ ಅಧ್ಯಕ್ಷರಾಗಿ ಆಯ್ಕೆಯಾಗಿ ಮಾತನಾಡಿದರು,
ಗ್ರಾಮದ ಎಲ್ಲಾರ ಸಹಕಾರ ಹಾಗೂ ಸಲಹೆ ಮೇರೆಗೆ ಶಾಲೆಯ ಸರ್ವಾಂಗೀಣ ಅಭಿವೃದ್ದಿ ಪಥದತ್ತ ಕೊಂಡುಯ್ಯುವ ಮೂಲಕ ಕಂಕಣ ಬದ್ಧನಾಗಿದ್ದೆನೆ ಅದರಂತೆ ಶಾಲೆಯಲ್ಲಿ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳಿಗೂ ನನ್ನ ಸಹಕಾರ, ಪ್ರೋತ್ಸಾಹ ಸದಾ ಇರುತ್ತದೆ, ಒಟ್ಟಾರೆ ಶೈಕ್ಷಣಿಕವಾಗಿ ಶಾಲೆ ಅಭಿವೃದ್ಧಿ ಹೊಂದಲು ಶ್ರಮಿಸುವೆ ಎಂದರು.
ಈ ಸಂಧರ್ಭದಲ್ಲಿ ಗೋವಿಂದಪ್ಪ
ಶಾಲೆಯ ಮುಖ್ಯ ಶಿಕ್ಷಕ ನಾಗಾರುಣ್,
ಗ್ರಾಮ ಪಂಚಾಯಿತಿ ಸದಸ್ಯ ಚಂದ್ರಣ್ಣ, ರವಿಕುಮಾರ್, ತಿಪ್ಪೇಸ್ವಾಮಿ, ನಾಗೇಶ್, ಇತರರು ಪಾಲ್ಗೊಂಡಿದ್ದರು

