ಭಾರತಿ ಜನತಾ ಪಾರ್ಟಿ ವತಿಯಿಂದ ಚಳ್ಳಕೆರೆಯಲ್ಲಿ ಮೈನಿಂಗ್ ಕಂಪನಿ ನಿಲ್ಲಿಸುವಂತೆ ಅಹೋರಾತ್ರಿ ಧರಣಿ

ಚಳ್ಳಕೆರೆ ನಗರದ ರೈಲ್ವೆ ಗೇಟ್ ಪಕ್ಕದಲ್ಲಿ ಐರನ್ ಓವರ್ ಮೈನಿಂಗ್ ಕಂಪನಿ ನಿಲ್ಲಿಸುವಂತೆ ಭಾರತೀಯ ಜನತಾ ಪಾರ್ಟಿಯ ರಾಜ್ಯಾಧ್ಯಕ್ಷ ಕೆಟಿ ಕುಮಾರಸ್ವಾಮಿ ಮೈನಿಂಗ್ ದುಷ್ಪರಿಣಾಮದ ಬಗ್ಗೆ ಮಾತನಾಡಿದರು,

ನಗರದಲ್ಲಿ ಈ ಹಿಂದೆ ಉತ್ತಮ ಗಾಳಿ ವಾತಾವರಣ ಕಂಡು ಬರುತ್ತಿದ್ದು, ಆದರೆ ಇತ್ತೀಚಿನ ದಿನಗಳಲ್ಲಿ ಐರನ್ ಮೈನಿಂಗ್ ಕಂಪನಿ ಒಂದು ದಿನನಿತ್ಯ ಮೈನಿಂಗ್ ಹೊಡೆಯುವುದರಿಂದ ಇಲ್ಲಿನ ಸುತ್ತಮುತ್ತಲಿನ ಸಾರ್ವಜನಿಕರ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬಿರುತ್ತಿದ್ದ ಹಿನ್ನೆಲೆ ಹಾಗೂ ಪರಿಸರ ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಅಹೋರಾತ್ರಿ ಧರಣಿಯನ್ನು ಮಾಡುತ್ತಿದ್ದೇವೆ ಈ ಮೈನಿಂಗ್ ಕಂಪನಿಯಿಂದ ಜನಸಾಮಾನ್ಯರಿಗೆ ಆರೋಗ್ಯದ ಮೇಲೆ ದುಷ್ಪರಿಣಾಮವಾಗಿದ್ದು ಈ ಹಿನ್ನಲೆ ನಮ್ಮ ಭಾರತೀಯ ಜನತಾ ಪಾರ್ಟಿ, ಮೈನಿಂಗ್ ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು

ಇನ್ನು ಪ್ರತಿಭಟನೆ ವೇಳೆ ಬಿಜೆಪಿ ತಾಲೂಕು ಅಧ್ಯಕ್ಷ ಸುರೇಶ್, ಮುಖಂಡರಾದ ಸೂರನಹಳ್ಖಿ ಶ್ರೀನಿವಾಸ್,, ಬಾಳೆ ಮಂಡಿ ರಾಮದಾಸ್, ಸೋಮಶೇಖರ್ ಮಂಡಿಮಠ, ರಮೇಶ್,, ಮಂಜುನಾಥ್, ಸೇರಿದಂತೆ ಅನೇಕರು ಭಾಗವಹಿಸಿದ್ದರು

About The Author

Namma Challakere Local News
error: Content is protected !!