ಚಳ್ಳಕೆರೆ : ರೈಲ್ವೆ ನಿಲ್ದಾಣದಲ್ಲಿ ಮೈನಿಂಗ್ ಡಂಪಿಂಗ್ ಮಾಡುವುದರಿಂದ ಅದರ ಧೂಳಿನ ಕಣಗಳು ಇಲ್ಲಿನ ಪರಿಸರದ ಮೇಲೆ ಸಾರ್ವಜನಿಕರ ಮೇಲೆ ಪರಿಣಾಮ ಬೀರಿ ಹೃದಯ ಸಂಬಂಧಿತ ಕಾಯಿಲೆಗಳಿಗೆ ಒಳಗಾಗುತ್ತಿದ್ದಾರೆ ಆದ್ದರಿಂದ ಈ ಕೂಡಲೇ ಮೈನಿಂಗ್ ಡಂಪಿಂಗ್ ಮಾಡುವುದನ್ನು ಈ ಕೂಡಲೇ ನಿಲ್ಲಿಸಿ ಸ್ಥಳಾಂತರಿಸಬೇಕು ಎಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ ಟಿ ಕುಮಾರಸ್ವಾಮಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ್ದಾರೆ.

ನಗರದ ಪ್ರವಾಸಿ ಮಂದಿರದಲ್ಲಿ ಬಿಜೆಪಿ ಪದಾಧಿಕಾರಿಗಳು ಹಾಗೂ ಮುಖಂಡರೊಟ್ಟಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು

ನಗರದ ರೈಲ್ವೇ ನಿಲ್ದಾಣವೋ ಅಥವಾ ಮೈನ್ಸ್ ಡಂಪಿಗ್ ಕೇಂದ್ರವೋ ಎಂಬ ಅನುಮಾನಕ್ಕೆ ಎಡೆಮಾಡಿದ್ದು ಯಾರೋ ಉದ್ದಾರ ಆಗಲು ರೈಲ್ವೇ ನಿಲ್ದಾಣದಲ್ಲಿ ಅಪಯಾಯಕಾರಿ ಮೈನಿಂಗ್ ಡಂಪಿಂಗ್ ಹಾಗೂ ಲೋಡಿಂಗ್ ಅನ್ ಲೋಡಿಂಗ್ ನಿಂದ ಅದಿರಿನ ಧೂಳು ಸುತ್ತಮುತ್ತಲಿನ ಪರಿಸರದ ಮೇಲೆ ಹರಡಿ ಗಂಭೀರ ಸಾಂಕ್ರಮಿಕ ರೋಗಳ ಭೀತಿ ಎದುರಾಗಿದೆ.

ಅದಿರು ಸಾಗಣೆ ಪರಿಣಾಮ ಸಮೀಪದ ಎರಡು ಕರೆಯಲ್ಲಿನ ನೀರು ಕಲುಷಿತಗೊಂಡಿದೆ. ಜನವಸತಿ, ಪ್ರದೇಶ, ಶಾಲೆ– ಕಾಲೇಜು ವಿದ್ಯಾರ್ಥಿಗಳು ಮತ್ತು ಸಾರ್ವಜನಿರ ಆರೋಗ್ಯಕ್ಕೂ ತೀವ್ರ ತೊಂದರೆಯಾಗುತ್ತಿದೆ. ಹೀಗಾಗಿ, ರೈಲ್ವೆ ನಿಲ್ದಾಣದಲ್ಲಿ ಅದಿರು ಲೋಡಿಂಗ್, ಅನ್‍ಲೋಡಿಂಗ್‍ ಬೇರೆ ಸ್ಥಳಕ್ಕೆ ಸ್ಥಳಾಂತರಿಸ ಬೇಕು ಪ್ರಕಾಶ್ ಐರನ್ ಪ್ಲಾಂಜ ಕಾರ್ಖಾನೆಗೆ ನೇರವಾಗಿ ರೈಲು ಮಾರ್ಗ ಅಳವಡಿಸಲಿಕೊಳ್ಳಲಿ ರೈಲ್ವೇ ನಿಲ್ದಾಣದಲ್ಲಿ ಮೈನಿಂಗ್ ಡಂಪಿಂಗ್ ಸ್ಥಗಿತ ಗೊಳಿಸದಿದ್ದರೆ ಬುಧವಾರ ದಿಂದಲೇ ರೈಲ್ವೇಗೇಟ್ ಬಳಿ ಬಿಜೆಪಿ ಹಾಗೂ ವಿವಿಧ ಸಂಘಟನೆಗಳಿಂದ ಅಹೋರಾತ್ರಿ ಧರಣಿ ನಡೆಸುವುದಾಗಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕೆ.ಟಿ.ಕುಮಾರಸ್ವಾಮಿ. ನಿಕಟಪೂರ್ವ ಅಧ್ಯಕ್ಷ ಸೂರನಹಳ್ಳಿಶ್ರೀನಿವಾಸ್ ಮಂಡಲ ಅಧ್ಯಕ್ಷ ಸುರೇಶ್ ಕರೆನೀಡಿದ್ದಾರೆ.

About The Author

Namma Challakere Local News
error: Content is protected !!