ಚಳ್ಳಕೆರೆ :
ಸ್ಥಳೀಯ ಶಾಸಕರ ಹೆಸರಿಗೆ ಮಸಿ ಬಳಿಯುವ ಹಿತದೃಷ್ಟಿಯಿಂದ ರೈಲ್ವೆ ಮೈನಿಂಗ್ ಅಸ್ತ್ರ ಬಳಸಿ ರಾಜಾಕೀಯವಾಗಿ ಅಹೋರಾತ್ರಿ ಧರಣಿ ನಡೆಸುವುದು ಬಿಜೆಪಿ ನಡೆ ಸರಿಯಲ್ಲ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ವೀರಭದ್ರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಅವರು ನಗರದ ಶಾಸಕರ ಭವನದ ಸಭಾಂಗಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಚಳ್ಳಕೆರೆ ನಗರದಲ್ಲಿ ಸತತವಾಗಿ ಮೂರು ಬಾರಿ ಗೆಲುವು ಸಾಧಿಸಿದ ಸ್ಥಳೀಯ ಶಾಸಕ ಟಿ. ರಘುಮೂರ್ತಿ ಅಭಿವೃದ್ಧಿ ಪದದತ್ತ ನಗರವನ್ನು ಕೊಂಡೊಯ್ಯುತ್ತಿದ್ದಾರೆ.
ಆದರೆ ಸುಖ ಸುಮ್ಮನೆ ಮೈನಿಂಗ್ ಡಂಪಿಂಗ್ ಮಾಡುವುದರಿಂದ ಪರಿಸರ ಹಾನಿಯಾಗುತ್ತದೆ , ಶಾಲಾ ಮಕ್ಕಳಿಗೆ ದೂಳಿನ ಕಣಗಳು ಗಾಳಿಗೆ ಬರುತ್ತವೆ ಎಂಬುದು ಅಧಿಕಾರಿಗಳಿಗೆ ಮನವಿ ನೀಡಿ ಸರಿಪಡಿಸಿ ಅದರ ಬದಲಾಗಿ ಸುಖಾ ಸುಮ್ಮನೆ ಶಾಸಕರ ಹೆಸರು ತರುವುದು ಶೋಭೆಯಲ್ಲ ಎಂದು ಗ್ಯಾರಂಟಿ ಯೋಜನೆ ಸಮಿತಿ ಅಧ್ಯಕ್ಷ ಗದ್ದಿಗೆ ತಿಪ್ಪೇಸ್ವಾಮಿ ಕಿಡಿಕಾರಿದ್ದಾರೆ.
ಇನ್ನೂ ಹೆಚ್.ಎಸ್.ಸೈಯದ್ ಮಾತನಾಡಿ, ಸತತವಾಗಿ ಮೂರು ಗೆಲುವು ಸಾಧಿಸಿದ ಶಾಸಕ ಟಿ.ರಘುಮೂರ್ತಿ ಇಂತಹ ಹಾನಿಯಾಗುವ ಯೋಜನೆಗಳಿಗೆ ಕೈ ಹಾಕುವುದಿಲ್ಲ, ಬದಲಾಗಿ ಬಿಜೆಪಿ ರಾಜಕೀಯ ಬಳಸಿ ಸುಮ್ಮನೆ ಶಾಸಕರ ಹೆಸರು ಬಳಸಿಕೊಳ್ಳುತ್ತಿದೆ, ನಿಮ್ಮ ರೈಲ್ವೆ ಖಾತೆ ಮಂತ್ರಿ ಮನೆಮುಂದೆ, ಸಂಸದರ ಮನೆ ಮುಂದೆ ನಿಮ್ಮ ಧರೀ ಮಾಡಬೇಕು ಅದರ ಬದಲಾಗಿ ನಿಲ್ದಾಣದಲ್ಲಿ ಧರಣಿ ನಡೆಸುವುದು ಶಾಸಕರ ಹೆಸರು ಬಳಸಿ ಆರೋಪಗಳನ್ನು ಮಾಡುವುದು ಸರಿಯಲ್ಲ ಎಂದು ಕಿಡಿಕಾರಿದ್ದಾರೆ.
ರಾಜ್ಯದ ಬಿಜೆಪಿ ರಾಜ್ಯಾಧ್ಯಕ್ಷರ ಖಜಾನೆ ತುಂಬಿಸಲು ಇಂತಹ ಹೋರಾಟಗಳು ಬಿಜೆಪಿ ಪ್ರೇರಿತವಾಗಿ ಸಹಜವಾಗಿವೆ, ನಿಮ್ಮ ಸರಕಾರದ ಮಂತ್ರಿಗಳು ಅಧಿವೇಶನದಲ್ಲಿ ಧ್ವನಿಎತ್ತಿ ಮೈನಿಂಗ್ ಡಂಪಿಂಗ್ ಯಾರ್ಡ್ ಬದಲಾಯಿಸಿಕೊಡಬಹುದಲ್ಲ, ಅದರ ಬದಲಾಗಿ ಶಾಸಕರ ಹೆಸರು ಬಳಸಿ ರಾಜಕೀಯ ಮಾಡುವುದು ಎಷ್ಟರ ಮಟ್ಟಿಗೆ ಸರಿ, ಅದರ ಬದಲಾಗಿ ನೀವೇ ಕೇಂದ್ರ ಸರ್ಕಾರಕ್ಕೆ ಒಳಪಟ್ಟಂತಹ ರೈಲ್ವೆ ಇಲಾಖೆ ಇರುತ್ತದೆ ಆದರೆ ರಾಜ್ಯ ಸರ್ಕಾರ ಹಾಗೂ ಸ್ಥಳೀಯ ಶಾಸಕರ ಸಹಕಾರ ಇದರಲ್ಲಿ ಇರುವುದಿಲ್ಲ ಆದ್ದರಿಂದ ನಿಮ್ಮ ಶಾಸಕರಿಗೆ ಹಾಗೂ ನಿಮ್ಮದೇ ಆದ ಕೇಂದ್ರ ಸರ್ಕಾರಕ್ಕೆ ನಿಮ್ಮ ಮನವಿ ಸಲ್ಲಿಸಿ ನಿಮ್ಮ ಬೇಡಿಕೆಗಳನ್ನು ಈಡೇರಿಸಿಕೊಳ್ಳಿ. ಅದರ ಬದಲಾಗಿ ಸುಖ ಸಾಮಾನ್ಯ ಸ್ಥಳೀಯ ಶಾಸಕರ ಮೇಲೆ ಆರೋಪ ಮಾಡುತ್ತಾ ಇಂತಹ ಪ್ರತಿಭಟನೆ ಮಾಡುವುದು ಸರಿಯಲ್ಲ ಎಂದು ವಿರೋಧ ಪಕ್ಷದ ಹೆಳಿಕೆಗೆ ತಿರುಗೇಟು ನೀಡಿದರು.
ಇನ್ನೂ ಇದೇ ಸಂಧರ್ಭದಲ್ಲಿ ಕಾಂಗ್ರೆಸ್ ಕಿಸಾನ್ ಸಂಘದ ಪದಾಧಿಕಾರಿ ನಾಗರಾಜ್, ಮಾತನಾಡಿದರು, ಜೊತೆಯಲ್ಲಿ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಟಿ.ಮಲ್ಲಿಕಾರ್ಜುನ, ವೈ. ಪ್ರಕಾಶ್,
ಸದಸ್ಯ ಬಿಟಿ.ರಮೇಶ್ ಗೌಡ, ಪಾಲಯ್ಯ, ಬೋರಯ್ಯ, ತಿಪ್ಪೇಸ್ವಾಮಿ, ಇತರರು ಹಾಜರಿದ್ದರು.


