ಚಳ್ಳಕೆರೆ :
ಚಿತ್ರದುರ್ಗ: ಬೀದಿಗಿಳಿದ ಆಶಾ ಅಂಗನವಾಡಿ
ಕಾರ್ಯಕರ್ತೆಯರು
ವಿವಿಧ ಸಂಘಟನೆಗಳ ನೇತೃತ್ವದಲ್ಲಿ ಇಂದು ಜಿಲ್ಲಾಧಿಕಾರಿಗಳ
ವೃತ್ತದಲ್ಲಿ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತರೆಯರು
ಸಾಮಾಜಿಕ ಸೇವಾ ಭದ್ರತೆ ಹಾಗೂ ಪಂಚಣಿಯನ್ನು ನೀಡುವಂತೆ
ಒತ್ತಾಯಿಸಿ, ಪ್ರತಿಭಟನೆಯನ್ನು ನಡೆಸಿದರು. ಓಬವ್ವ ವೃತ್ತದಲ್ಲಿ
ನೂರಾರು ಪ್ರತಿಭಟನಾಕಾರರು ಸುತ್ತುವರೆದು, ಸರ್ಕಾರದ
ವಿರುದ್ಧ ಘೋಷಣೆ ಹಾಕಿದರು. ಕೊಟ್ಟ ಮಾತಿನಂತೆ ಸರ್ಕಾರ
ನಡೆದುಕೊಂಡಿಲ್ಲ. ನಮ್ಮನ್ನು ನಿರ್ಲಕ್ಷಿಸದೆ ಕೊಟ್ಟ ಮಾತಿಗೆ
ಬದ್ಧರಾಗಿ ಮಾತು ಉಳಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

