ಚಳ್ಳಕೆರೆ :
ಚಿತ್ರದುರ್ಗ: ನಕಲಿ ಚಿನ್ನ ನೀಡಿ 35 ಲಕ್ಷ ವಂಚಿಸಿದ
ಆರೋಪಿಗಳ ಬಂಧನ
ನಕಲಿ ಚಿನ್ನದ ನಾಣ್ಯಗಳನ್ನು ಕೊಟ್ಟು ಜನರನ್ನು ವಂಚಿಸುತ್ತಿದ್ದ
ಇಬ್ಬರನ್ನು ಚಿತ್ರದುರ್ಗ ಗ್ರಾಮಾಂತರ ಠಾಣೆ ಪೊಲೀಸರು ವಶಕ್ಕೆ
ಪಡೆದಿದ್ದಾರೆ.
ಬಂಧಿತರನ್ನು ಜಗಲೂರಿನ ರಮೇಶ್ ಹಾಗು ಆಂಧ್ರದ
ರಾಮಕೃಷ್ಣ ಎಂದು ಗುರುತಿಸಲಾಗಿದೆ. ಬಂಧಿತರು ತಮಿಳುನಾಡಿನ
ಕೆ. ಪಾಂಡಿ ಎನ್ನೊರಿಗೆ ಕಳೆದ ಎರಡು ದಿನಗಳ ಹಿಂದೆ 2 ಕೆಜಿ ಚಿನ್ನದ
ನಾಣ್ಯವೆಂದು ನಕಲಿ ನಾಣ್ಯ ಕೊಟ್ಟು, 35 ಲಕ್ಷ ವಂಚಿಸಿದ್ದರು.
ವಂಚಕರಿಂದ ಪೊಲೀಸರು 22 ಲಕ್ಷ ವಶಕ್ಕೆ ಪಡೆದು ನಿನ್ನೆ
ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.

