“ಸತ್ಯವಾಕ್ಯ ಪರಿಪಾಲಕರು ಶ್ರೀರಾಮಕೃಷ್ಣರು”:- ಶ್ರೀಮತಿ ಮಂಜುಳಾ ಉಮೇಶ್ ಅಭಿಪ್ರಾಯ. ಚಳ್ಳಕೆರೆ:- ಶ್ರೀರಾಮಕೃಷ್ಣ ಪರಮಹಂಸರು ಸತ್ಯವಾಕ್ಯ ಪರಿಪಾಲಕರಾಗಿದ್ದರು ಎಂದು ಚಳ್ಳಕೆರೆಯ ಶ್ರೀಶಾರದಾಶ್ರಮದ ಸದ್ಭಕ್ತರಾದ ಶ್ರೀಮತಿ ಮಂಜುಳಾ ಉಮೇಶ್ ಅಭಿಪ್ರಾಯಪಟ್ಟರು. ನಗರದ ವಾಸವಿ ಕಾಲೋನಿಯ ಶ್ರೀಶಾರದಾಶ್ರಮದ ದೇವಸ್ಥಾನದಲ್ಲಿ ಆಯೋಜಿಸಿದ್ದ ಸತ್ಸಂಗ ಕಾರ್ಯಕ್ರಮದಲ್ಲಿ ಪಾಲ್ಗೊಂಡು ದಿವ್ಯತ್ರಯರಿಗೆ ಮಂಗಳಾರತಿ ನಡೆಸಿಕೊಟ್ಟ ಅವರು “ಯಗಾವತಾರ ಶ್ರೀರಾಮಕೃಷ್ಣ”-ಭಾಗ-2ರ ಗ್ರಂಥ ಪಾರಾಯಣ ಮಾಡುತ್ತ ಮಾತನಾಡುತ್ತಿದ್ದರು. ಈ ಸತ್ಸಂಗದ ಪ್ರಯುಕ್ತ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀವಿಷ್ಣು ಸಹಸ್ರನಾಮ ಪಠಣ, ಭಜನೆ, ಶ್ರೀರಾಮಕೃಷ್ಣರ ನಾಮಸ್ಮರಣೆ ನಡೆಯಿತು. ಸತ್ಸಂಗದಲ್ಲಿ ಶ್ರೀಮತಿ ಕವಿತಾ ಗುರುಮೂರ್ತಿ, ವೆಂಕಟಲಕ್ಷ್ಮೀ, ಯತೀಶ್ ಎಂ ಸಿದ್ದಾಪುರ, ಪುಷ್ಪಲತಾ ಸೇರಿದಂತೆ ಸದ್ಭಕ್ತರು ಭಾಗವಹಿಸಿದ್ದರು.

