ನಾಯಕನಹಟ್ಟಿ:: ಮದಕರಿ ನಾಯಕರು ಉತ್ತಮ ಆಡಳಿತವನ್ನು ನಡೆಸಿದ್ದಾರೆ ಎಂದು ಹಟ್ಟಿ ಮಲ್ಲಪ್ಪ ನಾಯಕ ಅಧ್ಯಕ್ಷ ಪಟೇಲ್ ಜಿಎಂ ತಿಪ್ಪೇಸ್ವಾಮಿ ಎತ್ತಿನಹಟ್ಟಿ ಗೌಡ್ರು ಹೇಳಿದರು. ಸೋಮವಾರ ಪಟ್ಟಣದ ವಾಲ್ಮೀಕಿ ವೃತ್ತದಲ್ಲಿ ರಾಜ ವೀರ ಮದಕರಿ ನಾಯಕರ ಜಯಂತ್ಯುತ್ಸವ ಪ್ರಯುಕ್ತ ಮದಕರಿ ನಾಯಕರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಈ ಸಮದರ್ಭದಲ್ಲಿ ಮಾತನಾಡಿದ ಅವರು, ಮದಕರಿ ನಾಯಕರ ವಂಶಸ್ಥರು ಸುಮಾರು 200 ವರ್ಷಗಳ ಕಾಲ ಚಿತ್ರದುರ್ಗವನ್ನು ಆಳ್ವಿಕೆ ನಡೆಸಿದ್ದರು. ಚಿತ್ರದುರ್ಗ ಹಾಗೂ ಸುತ್ತಮುತ್ತಲ ಜಿಲ್ಲೆಗಳಲ್ಲಿ ಕೆರೆಕಟ್ಟೆ ಹಾಗೂ ದೇವಸ್ಥಾನಗಳನ್ನು ಎಲ್ಲಾ ಜನಾಂಗದವರನ್ನು ಇಟ್ಟುಕೊಂಡು ನಿರ್ಮಾಣ ಮಾಡಿದ್ದಾರೆ. ಅದರಂತೆ ದುರ್ಗದ ಬೃಹನ್ಮಠ
ಮೂಲ ಸಂಸ್ಥಾನ ಅದಕ್ಕೆ ಹೇರಳವಾದ ಸಹಕಾರ ನೀಡಿ ಸಂಸ್ಥೆ ಬೆಳೆಸಿದವರು ಮದಕರಿ ನಾಯಕರು ಮತ್ತು ನಾಯಕನಹಟ್ಟಿ ಪಟ್ಟಣದಲ್ಲಿ ನೂತನವಾಗಿ ನಿರ್ಮಿಸಿರುವ ವಾಲ್ಮೀಕಿ ಪುಕ್ಕಳಿಗೆ ಹೋಬಳಿಯ ಎಲ್ಲಾ ನನ್ನ ಬಂಧುಗಳು ತಮ್ಮ ಕೈಲಾದಷ್ಟು ಧನಸಹಾಯವನ್ನು ನೀಡಿ ಸಹಕಾರ ಗೊಳಿಸಿದ್ದಕ್ಕೆ ಅವರಿಗೆ ಧನ್ಯವಾದಗಳು ಅರ್ಪಿಸಿದರು.

ಎಂದರು.

ಇದೆ ವೇಳೆ ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ ಮಾತನಾಡಿದರು. ಮದಕರಿ ನಾಯಕರು ಇಡೀ ಜಿಲ್ಲೆಗೆ ಹಾಗೂ ಮಧ್ಯ ಕರ್ನಾಟಕಕ್ಕೆ ಸ್ವಾಭಿಮಾನ ಹಾಗೂ ಧರ್ಮದ ಬೀಜವನ್ನು ಬಿತ್ತಿದ್ದಾರೆ. ದುರ್ಗದ ಸುತ್ತಮುತ್ತಲ ಜಿಲ್ಲೆಗಳಲ್ಲಿ ಹೇರಳವಾಗಿ ವಾಲ್ಮೀಕಿ ಜನಾಂಗದವರು ಧರ್ಮದ ಹಾದಿಯಲ್ಲಿ ದೈವ ಗುರು, ಧರ್ಮ ಗುರು, ದೇವರನ್ನು ಆರಾಧಿಸುತ್ತಿದ್ದಾರೆ,
ಅವರು
ಆರಾಧಿಸುತ್ತಿರುವುದರಿಂದ ಇಲ್ಲಿ ಶಾಂತಿ ನೆಲೆಸಿದೆ. ಮುಂದಿನ ದಿನಗಳಲ್ಲಿ ಎಲ್ಲಾ ವಾಲ್ಮೀಕಿ ಬಾಂಧವರು

ಸಹೋದರತ್ವ ಹಾಗೂ ಸ್ವಾಭಿಮಾನವನ್ನು ಸಮಾಜದಲ್ಲಿ ಕಳಕಳಿಯನ್ನು ಇಟ್ಟುಕೊಂಡು ಸಮಾಜದ ಏಳಿಗೆಗೆ ಶ್ರಮಿಸಲಿ ಎಂದು ಹಾರೈಸಿದರು.

ಇದೇ ವೇಳೆ ಶಿಕ್ಷಕ ಕೆ.ಓ. ರಾಜಯ್ಯ ಮಾತನಾಡಿದರು ನಿವೃತ್ತ ನ್ಯಾಯಾಧೀಶರು ಹಾಗೂ ವಾಲ್ಮೀಕಿ ಪ್ರಶಸ್ತಿಯ ಪುರಸ್ಕೃತರಾದ ಎನ್ ವೈ ಹನುಮಂತಪ್ಪನವರು ನಾಯಕನಹಟ್ಟಿ ಪಟ್ಟಣದಲ್ಲಿ ವಾಲ್ಮೀಕಿ ಪುತ್ತಳಿಯನ್ನು ಲೋಕಾರ್ಪಣೆ ಮಾಡಿರುವುದು ನಮ್ಮ ವಾಲ್ಮೀಕಿ ಸಮುದಾಯಕ್ಕೆ ಸಂತಸ ತಂದಿದೆ ಎಂದರು

ಈ ಸಂದರ್ಭದಲ್ಲಿ ನಾಯಕನಹಟ್ಟಿ ಪಟ್ಟಣದ ಹಾಗೂ ಹೋಬಳಿಯ ವಾಲ್ಮೀಕಿ ಮುಖಂಡರು, ಮಹಿಳೆಯರು,
ಯುವಕರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!