ಚಳ್ಳಕೆರೆ: ಬೆಲೆ ಕುಸಿತದಿಂದ ರೈತರು ಕಂಗಾಲು
ಚಳ್ಳಕೆರೆ ತಾಲೂಕಿನಲ್ಲಿ 25 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ
ಮೆಕ್ಕೆಜೋಳ ಬೆಳೆದಿದ್ದ ರೈತರು, ಬೆಲೆ ಕುಸಿತದಿಂದಾಗಿ
ಸಂಕಷ್ಟಕ್ಕೆ ಸಿಲುಕಿದ್ದಾರೆ. ಉತ್ತಮ ಬೆಲೆ ನಿರೀಕ್ಷೆಯಲ್ಲಿದ್ದ
ರೈತರಿಗೆ ಮಾರುಕಟ್ಟೆಯಲ್ಲಿ ಕ್ವಿಂಟಾಲ್ ಗೆ 1600 ರೂ.ಗೆ ಬೆಲೆ
ಕುಸಿದಿರುವುದು ಆತಂಕ ಮೂಡಿಸಿದೆ. 2300-2600 ರೂ.ಗೆ
ಮಾರಾಟವಾಗುವ ನಿರೀಕ್ಷೆಯಲ್ಲಿದ್ದ ಬೆಳೆಗಾರರು, ಕಡಿಮೆ ಬೆಲೆಗೆ
ಮಾರಾಟ ಮಾಡಲು ಮನಸ್ಸು ಮಾಡುತ್ತಿಲ್ಲ. ಮೆಕ್ಕೆಜೋಳ ಬಿಡಿಸಿ
ಚೀಲಕ್ಕೆ ತುಂಬುವ ಕೆಲಸವೂ ಕಷ್ಟಕರವಾಗಿದೆ ಎಂದು ರೈತ
ನಾಗೇಂದ್ರ ಅಳಲು ತೋಡಿಕೊಂಡಿದ್ದಾರೆ.

