ಮೊಳಕಾಲ್ಕೂರು: ಕುಸಿಯುತ್ತಿರುವ ಪಾಳೇಗಾರರ
ಕಾಲದ ಐತಿಹಾಸಿಕ ಬಾವಿ
ಮೊಳಕಾಲ್ಕೂರಿನ ಅಂಬೇಡ್ಕರ್ ಕಾಲೋನಿಯಲ್ಲಿರುವ ಪುರಾತನ
ಮತ್ತು ಪಾಳೇಗಾರರ ಕಾಲದಲ್ಲಿ ನಿರ್ಮಿಸಿರುವ ಇತಿಹಾಸಿಕ
ಬಾವಿಯ ಸುತ್ತು ಗೋಡೆ ಕುಸಿಯುತ್ತಿದ್ದು, ಸ್ಥಳೀಯರಲ್ಲಿ ತೀವ್ರ
ಆತಂಕ ಸೃಷ್ಠಿಸಿದೆ. ಯಾವುದೇ ಸಂದರ್ಭದಲ್ಲೂ ಅನಾಹುತವಾಗುವ
ಸಾಧ್ಯತೆ ಇದೆ. ನಿರ್ಲಕ್ಷ್ಯಕ್ಕೊಳಗಾದ ಬಾವಿಯ ಗೋಡೆ ಮಳೆಯ
ರಭಸಕ್ಕೆ ಕುಸಿಯುತ್ತಿದೆ. ಇದರಿಂದ ಬಾವಿ ಬಳಿ ಹೋಗಲು
ನಿವಾಸಿಗಳು ಭಯಪಡುತ್ತಿದ್ದಾರೆ. ಬಾವಿಯ ಪುನರ್ ನಿರ್ಮಾಣ
ಮಾಡಿ ಅದಕ್ಕೆ ಮೆಶ್ ಹಾಕುವಂತೆ ಸ್ಥಳೀಯರು ಒತ್ತಾಯಿಸಿದ್ದಾರೆ.

About The Author

Namma Challakere Local News
error: Content is protected !!