ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಭಿವೃದ್ಧಿಗೆ ಸರ್ವ ಸದಸ್ಯರು ಕೈಜೋಡಿಸಿ ಜಿ.ತಿಪ್ಪೇಸ್ವಾಮಿ.

ನಾಯಕನಹಟ್ಟಿ. ರೈತರಿಗೆ ಸರ್ಕಾರದಿಂದ ದೊರೆಯುವ ಯೋಜನೆಗಳನ್ನು ಸೌಲಭ್ಯಗಳನ್ನು ನೀಡಿ ಸಂಘದ ಅಭಿವೃದ್ಧಿಗೆ ಶ್ರಮಿಸಲಾಗುವುದು ಎಂದು ಗಜ್ಜುಗಾನಹಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಅಧ್ಯಕ್ಷ ಜಿ. ತಿಪ್ಪೇಸ್ವಾಮಿ ಹೇಳಿದರು.

ಶುಕ್ರವಾರ ಹೋಬಳಿಯ ಗಜ್ಜುಗಾನಹಳ್ಳಿ ಕೃಷಿ ಪತ್ತಿನ ಸಹಕಾರ ಸಂಘದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಈಗಾಗಲೇ ರೈತರಿಗೆ ನೀಡಿರುವ ಸಾಲ ಮರುಪಾವತಿ ಮತ್ತು ಹೊಸದಾಗಿ ಸಾಲ ನೀಡುವ ಕುರಿತಾಗಿ ಕ್ರಮ ಕೈಗೊಳ್ಳಲಾಗಿದೆ. ಹಿಂದೆ ಪಡೆದ ಸಾಲವನ್ನು ಮರುಪಾವತಿ ಮಾಡದೇ ಇದ್ದಲ್ಲಿ ನಬಾರ್ಡ್ ಯಾವುದೇ ಕಾರಣಕ್ಕೂ ಸಾಲ ನೀಡುವುದಿಲ್ಲ ಹಾಗಾಗಿ ರೈತರು ಹಿಂದೆ ಪಡೆದ ಸಾಲವನ್ನು ಮರುಪಾವತಿ ಮಾಡುವುದರ ಮೂಲಕ ಬ್ಯಾಂಕಿನ ಅಭಿವೃದ್ಧಿಗೆ ಸಹಕಾರ ನೀಡಬೇಕು. ರೈತರಿಗೆ ಸಾಲ ನೀಡಲು ಡಿಸಿಸಿ ಬ್ಯಾಂಕಿನಿಂದ 10ಕೋಟಿ 58ಲಕ್ಷ ರೂಪಾಯಿ ನೀಡುವಂತ ಮನವಿ ಮಾಡಿದ್ದೇವೆ. ನಮ್ಮ ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳಿಂದ ರೈತರ ಆರ್ಥಿಕ ಚೇತರಿಕೆಗಾಗಿ ಲೋನ್ ನೀಡುವಂತೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರಿಗೆ ಮನವಿ ಮಾಡಿದ್ದೇವೆ. ಈ ಸಭೆಯಲ್ಲಿ ರೈತರ ₹30ಲಕ್ಷ ಸುಸ್ತಿ ಬಡ್ಡಿಯನ್ನು ಕಡಿಮೆ ಮಾಡಲು ಈಗಾಗಲೇ ಆಡಳಿತ ಮಂಡಳಿಯಿಂದ ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಕೃಷಿ ಪತ್ತಿನ ಕಚೇರಿ ಬ್ಯಾಂಕ್ ನವೀಕರಣ ಮಾಡಲು ಸಚಿವ ಸುಧಾಕರ್ ಅಗತ್ಯ ಸಹಾಯ ಮಾಡಿದ್ದಾರೆ, ರೈತರ ಆರ್ಥಿಕ ಅಭಿವೃದ್ಧಿಗಾಗಿಯೇ ನಿರ್ಮಿಸಲ್ಪಟ್ಟ ಸಹಕಾರ ಸಂಘಗಳು ರೈತರ ಅಭಿವೃದ್ಧಿಗಾಗಿ ಸ್ಥಾಪಿಸಲ್ಪಟ್ಟಿವೆ ಹಾಗಾಗಿ ರೈತರ ಅಭಿವೃದ್ಧಿಯೇ ನಮ್ಮ ಧ್ಯೆಯ ಎಂದರು.

ನಿರ್ದೇಶಕಾದ ವೈ.ಪಿ. ಕನ್ನಯ್ಯ, ಸಿ.ಪಿ ಮಹೇಶ್ ಕುಮಾರ್, ಜಿ.ಬಸವರಾಜ್, ಕೆ.ಎಸ್. ಸಿದ್ದಲಿಂಗಯ್ಯ, ಟಿ. ಜಯಣ್ಣ ನಾಯ್ಕ, ಎಸ್ ಟಿ ರಾಜಣ್ಣ ತಾಯಮ್ಮ ಬಸಮ್ಮ ಜಿ.ವಿ. ಸತೀಶ್. ಹಾಗೂ ಮುಖ್ಯ ಕಾರ್ಯನಿರ್ವಾಣಾಧಿಕಾರಿ ಡಿ. ಬೋರಯ್ಯ, ಸಿಡಿಸಿಸಿ ಬ್ಯಾಂಕಿನ ಮೇಲ್ವಿಚಾರಕ ಜಿ.ಕೆ. ನವೀನ್, ಗಣಕಯಂತ್ರ ನಿರ್ವಾಹಕ ಟಿ. ಪ್ರದೀಪ್ ಸಿಬ್ಬಂದಿ ಎಂ ಪರ್ವತಯ್ಯ, ಇದ್ದರು.

About The Author

Namma Challakere Local News
error: Content is protected !!