ಚಳ್ಳಕೆರೆ :

12ನೇ ವರ್ಷದ ಶ್ರೀ ಸಾಯಿ ಗುರು ಪೂರ್ಣಿಮೆ ಪ್ರಯುಕ್ತ ನಗರದ ಸಾಯಿ ಮಂದಿರದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಗುರುಪೂರ್ಣಿಮೆಯ ಆಹ್ವಾನ ಪತ್ರಿಕೆ ಹಾಗೂ ಪೋಸ್ಟರ್ ಬಿಡುಗಡೆಗೊಳಿಸಲಾಯಿತು.

ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ಸಿ. ವೆಂಕಟೇಶ್ ಮೂರ್ತಿಯವರು ದಿನಾಂಕ 9.6. 2025 ಸೋಮವಾರ ಶ್ರೀ ಸಾಯಿ ರಥೋತ್ಸವ ಇರುತ್ತದೆ, ಜೊತೆಗೆ ಈ ಬಾರಿ ಗುರುಪೂರ್ಣಿಮೆ ಗುರುವಾರ ಬಂದಿರುವ ಕಾರಣ ಪೂರ್ವ ಸಿದ್ಧತೆಗಳ ಬಗ್ಗೆ ವಿಚಾರವಾಗಿ ಸಾಕಷ್ಟು ಸಲಹೆ ಸೂಚನೆಗಳನ್ನು ನೀಡಿದರು.

ಹಾಗೂ ಸಾಕಷ್ಟು ವಿಷಯಗಳ ಬಗ್ಗೆ ಚರ್ಚಿಸಿ, ಇನ್ನು ರೂಪುರೇಶಗಳ ವಿಚಾರವಾಗಿ ಚರ್ಚಿಸಲಾಯಿತು.

ಈ ಸಂದರ್ಭದಲ್ಲಿ ಕಾರ್ತಿಕ್ ಎಸ್ ಮೂರ್ತಿ ರವರು ಹಾಗೂ ಭಜನಾ ಮಂಡಳಿ ಅಧ್ಯಕ್ಷರಾದ ಅರುಣಾ ಜಗದೀಶ್, ಮತ್ತು ಉಪಾಧ್ಯಕ್ಷರಾದ ಕೆ ಎಂ ಜಗದೀಶ್ ಹಾಗೂ ಸಾಯಿ ನಗರ ಕ್ಷೇಮ ಅಭಿವೃದ್ಧಿ ಸಂಘದ ಅಧ್ಯಕ್ಷರಾದ ವೈ ವೀರಭದ್ರಪ್ಪ ನಾಗರೆಡ್ಡಿ ಅವರಿಂದ ಸಭೆಗೆ ಹಾಜರಾದ ಎಲ್ಲಾ ಸದ್ಭಕ್ತರಿಂದ ಮುಕ್ತವಾಗಿ ಸಲಹೆ ಸೂಚನೆಗಳನ್ನು ಸ್ವೀಕರಿಸಲಾಯಿತು.

ಇದೇ ಸಂದರ್ಭದಲ್ಲಿ ಚಳ್ಳಕೆರೆಯ ಖಾದಿ ಕೇಂದ್ರದಲ್ಲಿ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದ ವೇಮಣ್ಣ ರವರು ವಯೋನಿವೃತ್ತಿ ಯಾದ ಕಾರಣ ಅವರಿಗೆ ಅಭಿನಂದಿಸಲಾಯಿತು.

ಈ ಸಂದರ್ಭದಲ್ಲಿ ಶ್ರೀ ವೆಂಕಟರಾಯ ಸಾಯಿ ಸೇವಾ ಟ್ರಸ್ಟ್ ಆಡಳಿತ ಮಂಡಳಿಯವರು ಹಾಗೂ ಸಾಯಿ ಸದ್ಭಕ್ತರು ಹಾಜರಿದ್ದರು.

About The Author

Namma Challakere Local News
error: Content is protected !!