“ಭಗವಂತನ ಸಾಕ್ಷಾತ್ಕಾರಕ್ಕೆ ನಾಮ ಸಂಕೀರ್ತನೆ ಸುಲಭ ದಾರಿ”-ಮಾತಾಜೀ ಜ್ಯೋತ್ಸ್ನಾಮಯೀ ಅಭಿಮತ.

ಚಳ್ಳಕೆರೆ-ಭಗವಂತನ ಸಾಕ್ಷಾತ್ಕಾರಕ್ಕೆ ನಾಮ ಸಂಕೀರ್ತನೆ ಸುಲಭ ದಾರಿ ಎಂದು ಕನಕಪುರ ಹಾಗೂ ಚೆನ್ನಪಟ್ಟಣದ ಶ್ರೀಶಾರದಾಶ್ರಮದ ಅಧ್ಯಕ್ಷರಾದ ಮಾತಾಜೀ ಜ್ಯೋತ್ಸ್ನಾಮಯೀ ತಿಳಿಸಿದರು.

ಶಿವನಗರದ ಜಿ ಯಶೋಧಾ ಪ್ರಕಾಶ್ ಅವರ ನೇತೃತ್ವದ ಶ್ರೀಶಾರದಾದೇವಿ ಸತ್ಸಂಗ ಕೇಂದ್ರದಲ್ಲಿ ಆಯೋಜಿಸಿದ್ದ ವಿಶೇಷ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

               ಶ್ರೀರಾಮಕೃಷ್ಣರು ಹೇಳುವಂತೆ ಬೆಂಕಿಯ ಕಿಡಿ ಬಿದ್ದರೆ ಹತ್ತಿಯ ಬೆಟ್ಟವೇ ಭಸ್ಮೀಭೂತವಾಗುವಂ ತೆ ಭಗವನ್ನಾಮ ಸಂಕೀರ್ತನೆಯಿಂದ ಪಾಪವೆಂಬ ಪರ್ವತ ಭಸ್ಮವಾಗುವುದು. ಆದ್ದರಿಂದ ಭಕ್ತರು ಹೆಚ್ಚು ಹೆಚ್ಚು ಭಜನೆಗಳನ್ನು ಹೇಳುವುದರಿಂದ ಭಗವಂತನ ದರ್ಶನ  ಸುಲಭವಾಗಿ ಸಿಗುತ್ತದೆ ಎಂದರು.ಈ ಸತ್ಸಂಗದ ಅಂಗವಾಗಿ ಶ್ರೀಶಾರದಾಶ್ರಮದ ಸದ್ಭಕ್ತರಿಂದ ಸಾಮೂಹಿಕ ಶ್ರೀದೇವಿ ಸ್ತುತಿ ಪಾರಾಯಣ, ವಿಶೇಷ ಭಜನಾ ಕಾರ್ಯಕ್ರಮ ನಡೆಯಿತು. 

ಕಾರ್ಯಕ್ರಮದಲ್ಲಿ ಜಿ.ಯಶೋಧಾ ಪ್ರಕಾಶ್,ಉಷಾ ಶ್ರೀನಿವಾಸ್, ಭಾಗ್ಯಲಕ್ಷ್ಮೀ,ಎಂ ಗೀತಾ ನಾಗರಾಜ್,ಮಂಜುಳ ಉಮೇಶ್ ,ಯತೀಶ್ ಎಂ ಸಿದ್ದಾಪುರ, ಗೀತಾಲಕ್ಷ್ಮೀ, ನಾಗರಾತ್ನಮ್ಮ, ಶಾಂತಮ್ಮ ಶಾಂತವೀರಪ್ಪ, ರಶ್ಮಿ ವಸಂತ, ರಶ್ಮಿ ರಮೇಶ್, ವಿಜಯಲಕ್ಷ್ಮೀ,ಶೈಲಜ ಶ್ರೀನಿವಾಸ್, ಕೃಷ್ಣವೇಣಿ ವೆಂಕಟೇಶ್, ಸೌಮ್ಯ ಪ್ರಸಾದ್,ದ್ರಾಕ್ಷಾಯಣಿ ವಿಜಯೇಂದ್ರ,ಸುಮನ ಕೋಟೇಶ್ವರ ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!