**
ಚಿತ್ರದುರ್ಗ(ಕರ್ನಾಟಕ ವಾರ್ತೆ)ಜೂನ್.09:
ಚಳ್ಳಕೆರೆಯ ಬಾಪೂಜಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಓ.ಬಾಬುಕುಮಾರ್ ಅವರಿಗೆ ಕುವೆಂಪು ವಿಶ್ವವಿದ್ಯಾಲಯವು ರಾಜ್ಯಶಾಸ್ತ್ರ ವಿಷಯದಲ್ಲಿ ಪಿಹೆಚ್‍ಡಿ ಪದವಿಗೆ ಅಂಗೀಕರಿಸಿದೆ.
ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯ ಸಹ್ಯಾದ್ರಿ ಕಲಾ ಕಾಲೇಜಿನ ರಾಜ್ಯಶಾಸ್ತ್ರ ಸ್ನಾತಕೋತ್ತರ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಡಾ.ಎಂ.ಹೆಚ್.ಪ್ರಹ್ಲಾದಪ್ಪ ಅವರ ಮಾರ್ಗದರ್ಶನದಲ್ಲಿ “ಕರ್ನಾಟಕ ಸ್ಥಳೀಯ ಸರಕಾರಗಳ ಆಡಳಿತಾತ್ಮಕ ಅಭಿವೃದ್ಧಿಯಲ್ಲಿ ವಿದ್ಯುನ್ಮಾನ ಆಡಳಿತದ ಪಾತ್ರ” ಎಂಬ ವಿಷಯ ಕುರಿತು ಓ. ಬಾಬುಕುಮಾರ್ ಅವರು ಮಂಡಿಸಿದ ಮಹಾ ಪ್ರಬಂಧಕ್ಕೆ ಕುವೆಂಪು ವಿಶ್ವವಿದ್ಯಾಲಯ ಪಿಹೆಚ್‍ಡಿ ಪದವಿ ನೀಡಿದೆ.
ಓ.ಬಾಬುಕುಮಾರ್ ಅವರಿಗೆ ಪಿಹೆಚ್‍ಡಿ ಪಡೆದಿರುವ ಪ್ರಯುಕ್ತ ಬಾಪೂಜಿ ವಿದ್ಯಾಸಂಸ್ಥೆಯ ಕಾರ್ಯದರ್ಶಿ ಎಂ.ಜಗದೀಶ್, ಆಡಳಿತಾಧಿಕಾರಿ ಜಿ.ಬಾಲರೆಡ್ಡಿ ಮತ್ತು ಕಾಲೇಜಿನ ಸಿಬ್ಬಂದಿ ವರ್ಗ ಅಭಿನಂದಿಸಿದೆ.

About The Author

Namma Challakere Local News
error: Content is protected !!