ಬಿಜೆಪಿ ಟಿಕೆಟ್ ಆಕಾಂಕ್ಷಿಗಳಿಂದ ಕಾಲ್ನಡಿಗೆ ಮೂಲಕ ಭಕ್ತಿ ಸಮರ್ಪಣೆ : ಎನ್.ರಘುಮೂರ್ತಿ, ಆರ್.ಅನಿಲ್ ಕುಮಾರ್ , ನಾಯಕನಹಟ್ಟಿ ಶ್ರೀ ಗುರುತಿಪ್ಪೆರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ಬಾಗಿ

ಚಳ್ಳಕೆರೆ : ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ನಾಡಿನ ಲಕ್ಷಾಂತರ ಭಕ್ತಾದಿಗಳು ತಮ್ಮ ತನುಮನ ಧನವನ್ನು ಅರ್ಪಿಸುತ್ತಾ ಭಕ್ತಿ ಪೂರ್ವಕ ಭಾವ ವಶವಾಗುತ್ತಾರೆ.

ಅದರಂತೆ ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಗಳಾದ ಎನ್ ರಘುಮೂರ್ತಿ ಹಾಗೂ ಆರ್. ಅನಿಲ್ ಕುಮಾರ್ ಅಪಾರ ಕಾರ್ಯಕರ್ತರು ಇಂದು ಮುಂಜಾನೆಯೇ ಚಳ್ಳಕೆರೆಯಿಂದ ನಾಯಕನಹಟ್ಟಿ ಗುರು ತಿಪ್ಪೇರುದ್ರ ಸ್ವಾಮಿ ಸನ್ನಿಧಿಗೆ ಕಾಲ್ನಡಿಗೆ ಮೂಲಕ ಧಾವಿಸಿ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ.

ಇನ್ನೂ ಚಳ್ಳಕೆರೆ ಕ್ಷೇತ್ರದಲ್ಲಿ ಕಮಲ ಅರಳಿಸುವ ಮೂಲಕ ಅಧಿಕಾರದ ಗದ್ದುಗೆ ಹಿಡಿಯಲು ಕಳೆದ ಎರಡು ವರ್ಷಗಳಿಂದ ಸ್ವಾಮಿಯ ದೊಡ್ಡ ರಥೋತ್ಸವಕ್ಕೆ ಕಾಲ್ನಡಿಗೆ ಮೂಲಕ ಭಕ್ತಿ ಸಮರ್ಪಿಸುವ ತಹಶಿಲ್ದಾರ್ ಎನ್ ರಘುಮೂರ್ತಿ ಈ ವರ್ಷವೂ ಕೂಡ ಅಪಾರ ಮುಖಂಡರು, ಕಾರ್ಯಕರ್ತರ ಸಮ್ಮುಖದಲ್ಲಿ ಮುಂಜಾನೆ 4 ಗಂಟೆಗೆ ಚಳ್ಳಕೆರೆ ನಗರದ ವೀರಭದ್ರಸ್ವಾಮಿ ಸನ್ನಿದಿಯಿಂದ ನಾಯಕನಹಟ್ಟಿ ಗುರು ತಿಪ್ಪೇರುದ್ರಸ್ವಾಮಿ ಸನ್ನಿದಿವರೆಗೆ ಕಾಲ್ನಡಿಗೆ ಮೂಲಕ ತಮ್ಮ ಭಕ್ತಿಯನ್ನು ಸಮರ್ಪಿಸಿದ್ದಾರೆ..

ಇನ್ನೂ ಚಳ್ಳಕೆರೆ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾದ ಆರ್.ಅನಿಲ್ ಕುಮಾರ್ ಕೂಡ ಈ ಬಾರಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವಕ್ಕೆ ಕಾಲ್ನಡಿಗೆ ಮೂಲಕ ತಮ್ಮ ಭಕ್ತಿ ಸಮರ್ಪುಸಿರುವುದು ವಿಶೇಷವಾಗಿದೆ.

ಆದರೆ ಈ ಭಾರಿ ಚಳ್ಳಕೆರೆ ಕ್ಷೇತ್ರದಲ್ಲಿ ಕಮಲ ಯಾರ ಮೂಡಿಗೆ ದಕ್ಕುವುದೋ ಕಾದು ನೋಡಬೇಕಿದೆ,

ಇನ್ನೂ ಕಾಲ್ನಡಿಗೆ ಮೂಲಕ ಭಕ್ತಿ ಸಮರ್ಪಿಸಿದ ಆಕಾಂಕ್ಷಿಗಳಿಗೆ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಆರ್ಶಿವಾದ ಮಾಡುವರಾ..ಕಾದು ನೋಡಬೇಕಿದೆ.

About The Author

Namma Challakere Local News
error: Content is protected !!