ಚಳ್ಳಕೆರೆ : ಮಧ್ಯಕರ್ನಾಟಕ ದಕ್ಷಿಣ ಕಾಶಿ ಎಂದೇ ಪ್ರಸಿದ್ದ ಪಡೆದ ನಾಯಕನಹಟ್ಟಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೊಡ್ಡ ರಥೋತ್ಸವ ಪ್ರತಿ ವರ್ಷವೂ ಲಕ್ಷಾಂತರ ಭಕ್ತಾಧಿಗಳ ಸಮ್ಮುಖದಲ್ಲಿ ಅದ್ದೂರಿಯಾಗಿ ಜರುಗುತ್ತದೆ ಅದರಂತೆ
ಕಲ್ಲಿನ ಕೋಟೆಯ ಅವಳಿ ತಾಲೂಕುಗಳಲ್ಲಿ ನೆಲೆಸಿರುವ ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿ ಪವಾಡವನ್ನು ಪ್ರತಿ ವರ್ಷ ಮಾರ್ಚ ತಿಂಗಳಲ್ಲಿ ಕಾಣಬಹುದು.
ಅದರಂತೆ ಈ ಜಾತ್ರೆಗೆ ಸಾವಿರಾರು ಭಕ್ತರು ತಮ್ಮ ಭಕ್ತಿಯನ್ನು ವಿವಿಧ ರೀತಿಯಲ್ಲಿ ಹರಕೆ ತೀರಿಸುವ ಮೂಲಕ ತಮ್ಮ ಭಕ್ತಿ ಸಮರ್ಪಣೆ ಮಾಡುತ್ತಾರೆ.
ಅದರಂತೆ ಮೊಳಕಾಲ್ಮೂರು ವಿಧಾನ ಸಭಾ ಕ್ಷೇತ್ರದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ ಉರಿ ಬಿಸಿನಲಿ ರಥೋತ್ಸವಕ್ಕೆ ಆಗಮಿಸುವ ಭಕ್ತರಿಗೆ ಗರಣಿ ಕ್ರಾಸ್ ಬಳಿ ಉಚಿತ ಮಜ್ಜಿಗೆ, ನೀರು ನೀಡುವ ಇತರರಿಗೆ ಮಾದರಿಯಾಗಿದ್ದಾರೆ.
ಇನ್ನೂ ಈ ಕುರಿತು ಮಾಧ್ಯಮ ದೊಂದಿಗೆ ಮಾತನಾಡಿದ ಬಿಜೆಪಿ ಟಿಕೆಟ್ ಪ್ರಬಲ ಆಕಾಂಕ್ಷಿ ಪ್ರಭಾಕರ ಮ್ಯಾಸನಾಯಕ, ನಮ್ಮ ಭಾಗದ ಆರಾಧ್ಯದೈವ ಕಾಯಕ ಯೋಗಿ ಶ್ರೀ ಗುರು ತಿಪ್ಪೇರುದ್ರಸ್ವಾಮಿಗೆ ಲಕ್ಷಾಂತರ ಭಕ್ತರ ದಂಡು ಹರಿದು ಬರುತ್ತಿದೆ, ಅದರಂತೆ ಈ ಭಾಗದ ಜನರಿಗೆ ಕಾಯಕ ಯೋಗಿ ತತ್ವದಡಿಯಲ್ಲಿ ಭಕ್ತರಿಗೆ ಗರಣಿ ಕ್ರಾಸ್ ಬಳಿ ಉಚಿತವಾಗಿ ಮಜ್ಜಿಗೆ ಹಾಗೂ ಕುಡಿಯುವ ನೀರನ್ನು ನೀಡಲಾಗುತ್ತದೆ ಎಂದರು.
ಈ ಸಂದರ್ಭದಲ್ಲಿ ಮುಖಂಡರಾದ ಬಸವರಾಜು, ಬೋರೇಶ ಮಲ್ಲಿಕಾರ್ಜುನ,ಮಂಜುನಾಥ ಮೋಹನ, ಕೋಡಿಹಳ್ಳಿ ಬಸವರಾಜು, ನದೀಮ್, ಕೃಷ್ಣಮೂರ್ತಿ ಲಿಂಗಣ್ಣ ಮತ್ತಿತರರು ಉಪಸ್ಥಿತರಿದ್ದರು.

