ಚಳ್ಳಕೆರೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಟಿ ರಘುಮೂರ್ತಿ ರವರು ಚಳ್ಳಕೆರೆ ತಾಲೂಕಿನ ನಗರಂಗೆರೆ ದಾಸನಾಯಕನಹಟ್ಟಿ, ಗಾನಪ್ಪನಹಟ್ಟಿ, ಗ್ರಾಮದಲ್ಲಿ ನಡೆದ ಕಾರ್ಯಕರ್ತರ ಹಾಗೂ ಮುಖಂಡರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಚಳ್ಳಕೆರೆ ತಾಲೂಕಿನ ನಗರಂಗೆರೆ, ದಾಸನಾಯಕನಹಟ್ಟಿ, ಗಾನಪ್ಪನಹಟ್ಟಿ, ಗ್ರಾಮದಲ್ಲಿ ನಡೆದ ಮುಖಂಡರ ಮತ್ತು ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಂಡು ಕುಂದು ಕೊರತೆಗಳ ಬಗ್ಗೆ ಆಲಿಸಿ ಪರಿಹಾರ ನೀಡುವಂತೆ ಭರವಸೆ ನೀಡಿದರು.
ಈ ಸಂದರ್ಭದಲ್ಲಿ ಮಾಜಿ ತಾಲೂಕು ಪಂಚಾಯತ್ ಅಧ್ಯಕ್ಷರಾದ ಗದ್ದಿಗೆ ತಿಪ್ಪೇಸ್ವಾಮಿ, ಚಳ್ಳಕೆರೆ ಮತ್ತು ಪರಶುರಾಂಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವೀರಭದ್ರಯ್ಯ , ಶಶಿಧರ, ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕುಮಾರಸ್ವಾಮಿ, ಸದಸ್ಯರುಗಳಾದ ಹಿತಾಯಿತುಲ್ಲಾ, ಶೈಲಪ್ಪ, ಓಬಣ್ಣ, ರವಿ, ಮುಖಂಡರುಗಳಾದ ಮೈಲಾರಪ್ಪ, ದ್ಯಾಮಣ್ಣ, ರಂಗನಾಥ, ಬಾಬು, ನಿಂಗಣ್ಣ, ರಾಜಕ್ಕ, ಮುಖಂಡರು, ಕಾರ್ಯಕರ್ತರು ಮತ್ತು ಸಾರ್ವಜನಿಕರು ಉಪಸ್ಥಿತರಿದ್ದರು.

