ಮೊಳಕಾಲ್ಮೂರು ವಿಧಾನಸಭಾ ಕ್ಷೇತ್ರದ ತಳಕು ಹೋಬಳಿಯ ದೊಡ್ಡ ಉಳ್ಳಾರ್ತಿ ಗ್ರಾಮದಲ್ಲಿ ರಾಜ್ಯ ದ್ರಾಕ್ಷಿ ಮತ್ತು ವೈನ್ ಮಂಡಳಿಯ ಅಧ್ಯಕ್ಷರಾದ ಡಾ.ಬಿ.ಯೋಗೇಶ್ ಬಾಬು ರವರು ನೂತನ ಗ್ರಾಮ ಪಂಚಾಯಿತಿ ಕಟ್ಟಡ ನಿರ್ಮಾಣದ ಗುದ್ದಲಿ ಪೂಜೆ ಮಾಡುವುದರ ಮೂಲಕ ಶಂಕುಸ್ಥಾಪನೆ ನೆರವೇರಿಸಿದರು.*
ಈ ಸಂದರ್ಭದಲ್ಲಿ ದೊಡ್ಡ ಉಳ್ಳಾರ್ತಿ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಕರಿಯಮ್ಮ ಗೋವಿಂದಪ್ಪ, ಉಪಾಧ್ಯಕ್ಷರಾದ ಲಿಂಗರಾಜು, ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಾದ ನವನೀತ, ಗ್ರಾಮ ಪಂಚಾಯಿತಿ ಸದಸ್ಯರಾದ ರಾಜಣ್ಣ, ತಿಪ್ಪಯ್ಯ, ಜಯಣ್ಣ, ಈರಣ್ಣ, ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷರು ಹಾಗು ಹಾಲಿ ಸದಸ್ಯರಾದ ಶಂಕ್ರಮ್ಮ ಓಂಕಾರಪ್ಪ, ವರಲಕ್ಷ್ಮಿ, ಗೌರಮ್ಮ ಗೌರಿಶಂಕರ್, ಬೋರಮ್ಮ, ಓಬಯ್ಯ, ಕರಿಯಮ್ಮ ಪಾಲಯ್ಯ, ಲಕ್ಷ್ಮೀದೇವಿ ತಿಪ್ಪೇರುದ್ರಪ್ಪ, ಬೋರಯ್ಯ, ಮಾರುತಿ, ಸಿ ಶಿವಲಿಂಗಪ್ಪ
ತಳಕು ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷರಾದ ಹರೀಶ್ ಹಾಗು ದೊಡ್ಡ ಉಳ್ಳಾರ್ತಿ ಗ್ರಾಮದ ಮುಖಂಡರುಗಳು ಹಾಗು ಗ್ರಾಮಸ್ಥರು ಉಪಸ್ಥಿತರಿದ್ದರು.

