ಚಳ್ಳಕೆರೆ : ಕಳೆದ ಐದು ವರ್ಷಗಳಿಂದ ಗ್ರಾಮ ಪಂಚಾಯತಿಯ ಸಮಗ್ರ ಅಭಿವೃದ್ಧಿಗೆ ಸರ್ವ ಸದಸ್ಯರ ಸಹಕಾರದಿಂದ ಉತ್ತಮವಾದ ಕೆಲಸಗಳನ್ನು ಸಾರ್ವಜನಿಕರಿಗೆ ನೀಡಿದ್ದೆವೆ ಎಂದು ಗ್ರಾಮ ಪಂಚಾಯತಿ ಅಧ್ಯಕ್ಷ ಎಂ ಓಬಣ್ಣ ಹೇಳಿದರು.

ಅವರು ಗೌರಸಮುದ್ರ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶೇಷ ಸಭೆಯಲ್ಲಿ ಮಾತನಾಡಿದ ಅವರು, ಗೌರಸಮುದ್ರ ಗ್ರಾಮ ಪಂಚಾಯಿತಿ ಇಡೀ ಚಳ್ಳಕೆರೆಗೆ ಮಾದರಿಯಾಗುವಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದೇವೆ, ಸರ್ವ ಸದಸ್ಯರ ಸಹಕಾರದಿಂದ ಅಭಿವೃದ್ಧಿ ಪಥದತ್ತ ಕೊಂಡುಯ್ಯುವ ಮೂಲಕ ಮಾದರಿ ಗ್ರಾಮ ಪಂಚಾಯಿತಿ ಮಾಡಿದ್ದೆವೆ , ಅದರಂತೆ 15ನೇ ಹಣಕಾಸು ಯೋಜನೆಯಲ್ಲಿ ಎಲ್ಲ ಸದಸ್ಯರುಗಳು ಉತ್ತಮವಾದ ಕೆಲಸಗಳನ್ನು ಮಾಡಿದ್ದಾರೆ, ಇನ್ನು ಮಧ್ಯ ಕರ್ನಾಟಕದ ಆರಾಧ್ಯ ದೇವಿ ಶ್ರೀ ಗೌರಸಮುದ್ರ ಮಾರಮ್ಮ ದೇವಿ ತುಮುಲು ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಲಾಗಿದೆ, ಮುಂದಿನ ದಿನಗಳಲ್ಲಿ ಸರ್ವ ಭಕ್ತರಿಗೆ ಶುದ್ಧ ಕುಡಿ ನೀರಿನ ಸೌಲಭ್ಯ ಸೇವೆ ಸಿಗಲಿದೆ, ಗೌರಸಮುದ್ರ ಗ್ರಾಮಕ್ಕೆ ಆಗಮಿಸುವಂತಹ ಸಾರ್ವಜನಿಕರಿಗೂ ಹಾಗೂ ಭಕ್ತರಿಗೆ ವಿಶೇಷವಾದ ಸ್ವಾಗತ ಕೋರುವಂತಹ ಸ್ವಾಗತ ಬೋರ್ಡನ್ನು ಗ್ರಾಮದ ಕೆಇಬಿ ರಸ್ತೆ ಹಾಗೂ ಬಂಡೆ ತಿಮ್ಮಲಾಪುರಕ್ಕೆ ಹೋಗುವಂತಹ ಗ್ರಾಮದ ಮುಖ್ಯ ರಸ್ತೆಗೆ ಅಳವಡಿಸಲಾಗಿದೆ.

ಅದರಂತೆ ಮಹಾತ್ಮ ಗಾಂಧಿ ನರೇಗಾ ಉದ್ಯೋಗ ಖಾತ್ರಿಯಲ್ಲಿ ಯೋಜನೆಯಲ್ಲಿ ಶೌಚಾಲಯ, ವಾಲಿಬಾಲ್ ಕ್ರೀಡಂಗಣ, ಶಾಲಾ ಕಾಂಪೌಂಡ್, ಹೀಗೆ ಸುಮಾರು 40 ಲಕ್ಷಕ್ಕೂ ಹೆಚ್ಚು ಅನುದಾನದಲ್ಲಿ ಶಾಲೆಗೆ ಮೂಲಭೂತ ಸೌಲಭ್ಯವನ್ನು ಕಲ್ಪಿಸಿಕೊಡಲಾಗಿದೆ.

ಅದರಂತೆ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಸುಮಾರು 1,50,000 ವೆಚ್ಚದಲ್ಲಿ ಸಾಂಸ್ಕೃತಿ ಕಾರ್ಯಕ್ರಮ ಚಟುವಟಿಕೆಗಳಿಗಾಗಿ ನೂತನ ಕಲಾಮಂದಿರ ನಿರ್ಮಿಸಲಾಗಿದೆ. ಗ್ರಾಮದ ಸಿರಿವಲ್ಲಿ ನಗರದ ಸಾರ್ವಜನಿಕರಿಗೆ ಹೈಟೆಕ್ ಶೌಚಾಲಯ ನಿರ್ಮಿಸಲಾಗಿದೆ.

ಇನ್ನೂ
ಬಡ ಜನರು ಕಷ್ಟಕ್ಕೆ ನೆರವಾಗುವಂತಹ ಮಹತ್ವಕಾಂಕ್ಷಿ ಯೋಜನೆಯನ್ನು ಹಮ್ಮಿಕೊಂಡಿದ್ದು ಗ್ರಾಮದಲ್ಲಿ ಯಾವುದೇ ಸಮುದಾಯ ಯಾವುದೇ ಕುಟುಂಬದಲ್ಲಿ ಸಾವು ನೋವು ಸಂಭವಿಸಿದರೆ ನನ್ನ ವೈಯಕ್ತಿಕವಾಗಿ 5000ಗಳನ್ನು ನೀಡಿ ಅವರಿಗೆ ಸಾಂತ್ವಾನ ಹೇಳುವಂತಹ ಮಹತ್ವಕಾಂಕ್ಷಿ ಯೋಜನೆಯನ್ನು ರೂಪಿಸಿಕೊಂಡಿದ್ದೇನೆ ಎಂದರು‌

ಇದೇ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ ಓಬಣ್ಣ , ಉಪಾಧ್ಯಕ್ಷ ನಾಗವೇಣಿ, ಸದಸ್ಯ ಈರಣ್ಣ, ಶಶಿಕುಮಾರ್, ತಿಮ್ಮಾರೆಡ್ಡಿ ಮಲ್ಲಯ್ಯ ,ಶಾರದಮ್ಮ ,ಮಾರಣ್ಣ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕೊರ್ಲಯ್ಯ, ಬಿಲ್ ಕಲೆಕ್ಟರ್ ಪ್ರಕಾಶ್, ಕಂಪ್ಯೂಟರ್ ಆಪರೇಟರ್ ರಾಜಪ್ಪ ಹಾಗೂ ಸರ್ವ ಸದಸ್ಯರು ಹಾಜರಿದ್ದರು.

About The Author

Namma Challakere Local News
error: Content is protected !!