ಚಳ್ಳಕೆರೆ :
ವಿಬಿ ಜಿ ಗ್ರಾಮ್ ಜಿ ತಿರಸ್ಕರಿಸಿ ಇವರ ಮುಖಾಂತರ ಪ್ರಧಾನಮಂತ್ರಿಗಳಿಗೆ ಮನನರೇಗಾ ಪುನರ್ ಸ್ಥಾಪಿಸುವಂತೆ ಗ್ರಾಮೀಣ ಕೂಲಿ ಕಾರ್ಮಿಕರ ಸಂಘಟನೆ (ಗ್ರಾಕುಸ್ ) ಕಡೆಯಿಂದ ಒತ್ತಾಯಿಸಿ ಮನವಿ ಕೊಡಲಾಯಿತು.
ಚಳ್ಳಕೆರೆ :
ವಿಬಿ ಗ್ರಾಮ್ ಜಿ ಮಸೂದೆಯನ್ನು ಹಿಂಪಡೆದು ಮಹಾತ್ಮಗಾಂಧಿ ರಾಷ್ಟ್ರೀಯ
ಗ್ರಾಮೀಣ ಉದ್ಯೋಗ ಖಾತರಿ ಕಾನೂನನ್ನು ಪುನರ್ ಸ್ಥಾಪಿಸಬೇಕು ಎಂದು ಜಿಲ್ಲಾ ಉಪವಿಭಾಗ ಅಧಿಕಾರಿಗಳಿಗೆ ಗ್ರಾಕೂಸ್ ಸದಸ್ಯರು ಮನವಿ ಸಲ್ಲಿಸಿದರು.
ಗ್ರಾಮೀಣ ಕಾರ್ಮಿಕರ ಉದ್ಯೋಗದ ಹಕ್ಕಾಗಿದ್ದ ಮನರೇಗಾ ಕಾನೂನನ್ನು ರದ್ದುಗೊಳಿಸಿ
ಉದ್ಯೋಗವನ್ನು ಕೇಂದ್ರ ಸರಕಾರದ ಮರ್ಜಿಗೆ ಒಳಪಡಿಸಿ ಕಾರ್ಮಿಕರನ್ನು ಗುಲಾಮರನ್ನಾಗಿಸುವ ಹೊಸ
ಕಾನೂನು ವಿಬಿ ಗ್ರಾಮ್ ಜಿ ಗೆ ಮನರೇಗಾ ಕಾರ್ಮಿಕರಾದ ನಮ್ಮ ಸಂಪೂರ್ಣ ವಿರೋಧವಿದೆ.
ಕನಿಷ್ಟ ವೇತನದ ಹಕ್ಕನ್ನು ಬದಿಗೆ ಸರಿಸಿ ಕೇಂದ್ರ ಸರಕಾರವೇ ನಿರ್ಧರಿಸುವ ವೇತನ, ಕೆಲಸ,
ಕಾಮಗಾರಿಗಳ ಮೂಲಕ ವಲಸೆಯನ್ನು ಹೆಚ್ಚಿಸಿ, ಕಾರ್ಮಿಕರನ್ನು ಗುತ್ತಿಗೆದಾರರಿಗೆ ಅಗ್ಗದ ಕೂಲಿಗೆ ಪೂರೈಸುವ ಈ
ವಿಬಿ ಗ್ರಾಮ್ ಜಿ ಕಾನೂನನ್ನು ನಾವು ತಿರಸ್ಕರಿಸುತ್ತೇವೆ.
ಈಗಾಗಲೇ ನೀವೇ ಆದೇಶಿಸಿದ ಜನವರಿ 26 ರ ಗ್ರಾಮ ಸಭೆಯಲ್ಲಿ ನಾವು ಹೊಸ ಕಾನೂನನ್ನು
ವಿರೋಧಿಸಿ ಸರ್ವಾನುಮತದಿಂದ ಠರಾವು ಪಾಸು ಮಾಡಿಸಿದ್ದೇವೆ.
ಬೇಡಿಕೆ ಆಧಾರಿತ, ಸಾರ್ವತ್ರಿಕ, ಉದ್ಯೋಗದ ಹಕ್ಕಿನ ಮನರೇಗಾ ಕಾನೂನನ್ನು ಮರುಸ್ಥಾಪಿಸಬೇಕು.
ಎಬಿ ಗ್ರಾಮ್ ಜಿ ಕಾನೂನನ್ನು ಹಿಂಪಡೆಯಬೇಕೆಂದು ಒತ್ತಾಯಿಸುತ್ತಿದ್ದೇವೆ.
ಗಾಂಧಿ ಹುತಾತ್ಮರಾದ ದಿನದಂದು
ಗಾಂಧಿ ಆಶಯವನ್ನು ಎತ್ತಿ ಹಿಡಿಯಲೇಬೇಕು ಎಂದು ಮನವಿಯಲ್ಲಿ ಉಲ್ಲೇಖ ಮಾಡಿದ್ದಾರೆ.
ಇದೇ ಸಂಧರ್ಭದಲ್ಲಿ
ಚಿತ್ರದುರ್ಗ ಗ್ರಾಕೂಸ್ ಕಾರ್ಯಕರ್ತರು
ತೆಜೇಶ್ವರಿ,ಚಿತ್ರದುರ್ಗ
ಮಂಜಮ್ಮ , ಪರಶುರಾಂಪುರ
ಸಂಧ್ಯಾ , ಸಿದ್ದೇಶ್ವರನದುರ್ಗ
ಪರಮೇಶ್ ಬಿ , ಜುಂಜರಗುಂಟೆ
ತಿಪ್ಪೇಸ್ವಾಮಿ , ಉಪ್ಪಾರಟ್ಟಿ
ಹೇಮಂತು , ಮನೇಕೋಟೆ
ನೇತ್ರ ಹಿರಿಯೂರು ಇತರರು ಇದ್ದರು.

