ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲೂಕುಗಳು ಶ್ರದ್ಧಾ ಭಕ್ತಿ ಮತ್ತು ಸಾಂಸ್ಕೃತಿಕ ಕೇಂದ್ರಗಳು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಅವರು ಮೊಳಕಾಲ್ಮೂರು ತಾಲೂಕಿನ ಚಿಕ್ಕುಮತಿ ಗ್ರಾಮದಲ್ಲಿ ಕಂಪ್ಳ ರಂಗಸ್ವಾಮಿ ದೇವರ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿ, ಬುಡಕಟ್ಟು ಸಮುದಾಯಗಳು ಭಕ್ತಿ ಮತ್ತು ನಂಬಿಕೆಗೆ ಕಠಿಣ ಉಪವಾಸ ಮತ್ತು ಶ್ರದ್ಧೆಯಿಂದ ಈ ದೇವಸ್ಥಾನಕ್ಕೆ ಬರುವ ಭಕ್ತಾದಿಗಳು ನಡೆದುಕೊಳ್ಳುತ್ತಾರೆ ವಿಶಿಷ್ಟವಾದ ಇತಿಹಾಸ ಮತ್ತು ಪರಂಪರೆ ಇರುವಂತಹ ದೇವಸ್ಥಾನ ಬುಡಕಟ್ಟು ಸಮುದಾಯಗಳ ಎಲ್ಲ ದೇವಸ್ಥಾನಕ್ಕಿಂತಲೂ ಕಳಸಪ್ರಾಯವಾದಂತ ದೇವಸ್ಥಾನ ಇಂತಹ ಧಾರ್ಮಿಕ ಶ್ರದ್ಧೆಯಿಂದ ಸ್ವಾಭಿಮಾನ ಮತ್ತು ಸಹಿಷ್ಣತೆ ಇಮ್ಮಡಿಯಾಗುತ್ತದೆ ಸಹೋದರತ್ವ ಮತ್ತು ಹಿಂದೂ ಸನಾತನ ಸಂಸ್ಕೃತಿಯ ಉಳಿವಿಗೆ ಇಂತಹ ಕಾರ್ಯಗಳು ನೆರವಾಗುತ್ತವೆ ಇಂತಹ ಭಕ್ತಿ ಪರಂಪರೆ ಕಾರ್ಯಗಳ ಜೊತೆ ಇಲ್ಲಿಯ ಜನಗಳ ಸಾಮಾಜಿಕ ತಿಥಿ ಕಥೆಗಳು ಕೂಡ ಸದೃಢವಾಗಬೇಕು ಶೈಕ್ಷಣಿಕವಾಗಿ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಬೇಕು ಸಾಮಾಜಿಕ ಪ್ರಜ್ಞೆಯನ್ನು ಉಳಿಸಿಕೊಳ್ಳಬೇಕು ಈ ಭಾಗದಲ್ಲಿ ಸಾಕ್ಷರತಾ ಪ್ರಮಾಣ ಕಡಿಮೆ ಇದ್ದರೂ ಕೂಡ ಯುವಕರಲ್ಲಿ ಸ್ವಾಭಿಮಾನದ ಪ್ರಜ್ಞೆ ಮನೆ ಮಾಡಿದೆ ಯುವಕರಿಂದ ಹಿಂದೂ ಧರ್ಮದ ಸನಾತನ ಸಂಸ್ಕೃತಿಯನ್ನು ಉಳಿಸುವಂತ ಸಂಕಲ್ಪವನ್ನು ಮಾಡಬೇಕೆಂದು ಹೇಳಿದರು .

ಇದೇ ಸಂದರ್ಭದಲ್ಲಿ ದಾವಣಗೆರೆ ವೃತ್ತ ನಿರೀಕ್ಷಕ ಉಮೇಶ್ ಮೊಳಕಾಲ್ಮೂರು ಆರಕ್ಷಕ ಉಪ ನಿರೀಕ್ಷಕ ಮಹೇಶ್ ಹೊಸಪೇಟೆ, ನನ್ನಿವಾಳ ಕಟ್ಟೆಮನೆ ದೊರೆಬಯಣ್ಣ ನಲಗೇತನಟ್ಟಿ ಸಣ್ಣ ಬೋರಯ್ಯ, ಮತ್ತು ಮಂಜುನಾಥ್ ಕಂಬಳ ರಂಗಸ್ವಾಮಿ ಗುಡಿ ಕಟ್ಟಿನ ಎಲ್ಲ ಕಿಲಾರಿಗಳು ಸಮಸ್ತ ಭಕ್ತಾದಿಗಳು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!