ಚಳ್ಳಕೆರೆ : ಕಳೆದ ಹಲವಾರು ವರ್ಷಗಳಿಂದ ನಗರ ಸಭೆಯ ಹೊರಗುತ್ತಿಗೆ ಪೌರಕಾರ್ಮಿಕರಾಗಿ ಸೇವೆ ಸಲಿಸಿದಂತಹ ಕಾರ್ಮಿಕರನ್ನು ಮರು ಆಯ್ಕೆ ಮಾಡಿಕೊಳ್ಳಬೇಕು ಎಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ
ವಾಸುದೇವ್‌ ಮೇಟಿ ಬಣ ದಿಂದ ಪ್ರತಿಭಟನೆ ನಡೆಸಿ ತಹಶಿಲ್ದಾರ್ ರೇಹಾನ್ ಪಾಷಗೆ ಮನವಿ ಸಲ್ಲಿಸಿದರು.

ಅವರು ನಗರದ ನಗರಸಭೆ ಮುಂಬಾಗ ಧರಣಿ ಸ್ಥಳದಲ್ಲಿ ಮಾತನಾಡಿದರು,
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ಪ್ರತಿಭಟನಾ
ಮೆರವೆಣೆಗೆ ಮುಂಜಾನೆ ನಗರದ ಪ್ರವಾಸಿ ಮಂದಿರದಿಂದ ನೆಹರು ವೃತ್ತ ಹಾಗೂ
ನಗರಸಭೆಯ ಮುಂಭಾಗ ಪ್ರತಿಭಟನೆ ನಡೆಸಿದರು.

ಚಳ್ಳಕೆರೆ ನಗರದಲ್ಲಿ ಕಳೆದ ಸುಮಾರು ವರ್ಷಗಳಿಂದ ಕರೋನಾ ಅಂತಹ ಸಂದರ್ಭದಲ್ಲಿ ಪೌರಕಾರ್ಮಿಕರಾಗಿ ಸೇವೆ ಸಲ್ಲಿಸಿದಂತಹ ಕಾರ್ಮಿಕರನ್ನು ಹೊರ ಗುತ್ತಿಗೆ ಪೌರಕಾರ್ಮಿಕರನ್ನಾಗಿ ಸೇರಿಸಿಕೊಳ್ಳುವಂತೆ ನಗರದಲ್ಲಿ ಪ್ರತಿಭಟನೆ ನಡೆಸಿದರು. ‌
ಕೊರೊನ ಸಂಧರ್ಭದಲ್ಲಿ ಕೆಲಸ ಮಾಡಿದಂತಹ ಕಾರ್ಮಿಕರನ್ನು ಮೊದಲ ಆದ್ಯತೆ ಮೇರೆಗೆ ಪರಿಗಣಿಸಿ ಆಯ್ಕೆ ಮಾಡಿಕೊಳ್ಳಬೇಕು, ಎಲ್ಲ ಮನವಿ ನೀಡಿದರು.

ಇದೇ ಸಂಧರ್ಭದಲ್ಲಿ ಗಜಪಡೆಯ ಅಧ್ಯಕ್ಷೆ ಜಯಲಕ್ಷ್ಮಿ, ಹಾಗೂ ಇತರರು ರೈತ ಮುಖಂಡರು, ಕಾರ್ಮಿಕರು ಇದ್ದರು.

About The Author

Namma Challakere Local News
error: Content is protected !!