ಚಳ್ಳಕೆರೆ : ಶ್ರೀಯುತ ಭೀಮಣ್ಣ ಖಂಡ್ರೆಯವರ ನಿಧನದಿಂದ ಇಡೀ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ ಎಂದು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ತಾಲೂಕು ಘಟಕ ಅಧ್ಯಕ್ಷ ಡಿಜೆ.ಕಿರಣ್ ಶಂಕರ್ ಸಂತಾಪ ಸೂಚಿಸಿದರು.

ಅವರು ನಗರದ ಬೆಂಗಳೂರು ರಸ್ತೆಯ ವೀರಶೈವ ಕಲ್ಯಾಣ ಮಂಟಪದ ಕಛೇರಿಯಲ್ಲಿ ದಿ.ಭೀಮಣ್ಣ ಕಂಡ್ರೆ ರವರ ಶ್ರದ್ಧಾಂಜಲಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಮಾತನಾಡಿದರು,

ಹಿರಿಯ ಕಾಂಗ್ರೆಸ್ಸಿಗರಾದ ಲಿಂಗೈಕ್ಯ ಶ್ರೀ ಭೀಮಣ್ಣ ಖಂಡ್ರೆ ಅವರ ಸೇವೆಗಳು ಜನರ ನೆನಪಿನಲ್ಲಿ ದೀರ್ಘಕಾಲ ಉಳಿಯುತ್ತವೆ, ವೀರಪ್ಪ ಮೊಯ್ಲಿ ಸರ್ಕಾರದಲ್ಲಿ ಸಾರಿಗೆ ಸಚಿವರಾಗಿದ್ದ ಶ್ರೀ ಖಂಡ್ರೆ ಅವರು ನಾಲ್ಕು ಬಾರಿ ಶಾಸಕರಾಗಿದ್ದರು ಮತ್ತು ಎರಡು ಬಾರಿ ವಿಧಾನ ಪರಿಷತ್ ಸದಸ್ಯರಾಗಿದ್ದರು ಎಂದರು.

ಇನ್ನೂ ಉಪಾಧ್ಯಕ್ಷರಾದ ಭಾಗ್ಯಮ್ಮ ಸಂತಾಪ ಸಭೆಯಲ್ಲಿ, ಶಿಕ್ಷಣ ತಜ್ಞರಾದ ಶ್ರೀ ಖಂಡ್ರೆ 1936 ರಿಂದ 1993 ರವರೆಗೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇದು ಭಾಲ್ಕಿಯಲ್ಲಿ ಹೆಸರಾಂತ ಇಂಜಿನಿಯರಿಂಗ್ ಕಾಲೇಜನ್ನು ನಡೆಸುವುದರ ಜೊತೆಗೆ ಶಿಕ್ಷಣ ಸಂಸ್ಥೆಗಳ ಸರಪಳಿಯನ್ನು ಸಹ ನಡೆಸುತ್ತಿದೆ,

ಶತಾಯುಷಿಗಳಾಗಿದ್ದ ಅಖಿಲ ಭಾರತ ವೀರಶೈವ ಮಹಾಸಭಾದ ಮಾಜಿ ಅಧ್ಯಕ್ಷ ಲಿಂಗೈಕ್ಯ ಶ್ರೀ ಭೀಮಣ್ಣ ಖಂಡ್ರೆ ಅವರ ನಿಧನಕ್ಕೆ ತೀವ್ರ ಸಂತಾಪ ಸೂಚಿಸಿ, ಅವರ ನಿಧನವು ಸಾರ್ವಜನಿಕ ಜೀವನದಲ್ಲಿ ದೊಡ್ಡ ಶೂನ್ಯವನ್ನು ಸೃಷ್ಟಿಸಿದೆ ಮತ್ತು ಅವರ ಸೇವೆಗಳು ಶಾಶ್ವತವಾಗಿ ಸ್ಮರಣೀಯವಾಗಿವೆ ಎಂದು ಹೇಳಿದ್ದಾರೆ.

ಇದೇ ಸಂಧರ್ಭದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ(ರಿ) ಚಳ್ಳಕೆರೆ ತಾಲೂಕು ಘಟಕ ಅಧ್ಯಕ್ಷ ಡಿಜೆ ಕಿರಣ್ ಶಂಕರ್ , ಉಪಾಧ್ಯಕ್ಷರು ಮುರುಗೇಶ್ , ಉಪಾಧ್ಯಕ್ಷೆ ಭಾಗ್ಯಮ್ಮ, ಕೋಶ ದಕ್ಷರಾದ ರವಿಕುಮಾರ್, ಜಿಟಿ ತಿಪ್ಪೇಸ್ವಾಮಿ, ಸಿದ್ದು, ಪ್ರಮೀಳಾ ಜಗದೀಶ್,ಮಂಜುಳಾ ಡಿ ಪಿ ಉಮಾ ಶಿವಕುಮಾರ್ ಮತ್ತು ಶಾಂತಕುಮಾರಿ ಜಗದೀಶ ಇತರರು ಸಂತಾಪದಲ್ಲಿ ಭಾಗವಹಿಸಿದ್ದರು.

About The Author

Namma Challakere Local News
error: Content is protected !!