filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (-1.0, -1.0);sceneMode: 3145728;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 43;

ಚಳ್ಳಕೆರೆ : ಶಿಕ್ಷಣ ಪ್ರೇಮಿಯೆಂದ ಹೆಸರುವಾಸಿಯಾಗಿದ್ದ ಸಿರಿಯಣ್ಣನವರು ಎಲ್ಲಾ ಧರ್ಮದವರನ್ನು ತನ್ನವರಂತೆ ಕಾಣುವ ವ್ಯಕ್ತಿತ್ವವುಳ್ಳವರು, ವಿವಿಧ ಹುದ್ದೆಗಳನ್ನು ಅಂಲಕರಿಸಿ ತಾಲೂಕು ಆದ್ಯಾಂತ ಅಪಾರ ಅಭಿಮಾನಿ ಬಳಗ ಹೊಂದಿದರು ಎಂದು ತಾಲೂಕು ಪಂಚಾಯತಿ ಮಾಜಿ ಅಧ್ಯಕ್ಷರಾದ ಉಪ್ಪಾರಟ್ಟಿ ಅಜ್ಜಪ್ಪ ಹೇಳಿದರು.

ಅವರು ನಗರದ ನೂರು ಹಾಸಿಗೆಯ ಸಾರ್ವಜನಿಕ ಆಸ್ಪತ್ರೆಯಲ್ಲಿ ದಿ.ಬಿವಿ.ಸಿರಿಯಣ್ಣ ನವರ
ಮೊದಲನೇ ವರ್ಷದ ಪುಣ್ಯಸ್ಮರಣೆ ಅಂಗವಾಗಿ ರೋಗಿಗಳಿಗೆ ಬ್ರೆಡ್‌ ಹಣ್ಣು ವಿತರಿಸಿ ಮಾತನಾಡಿ, ಸರ್ವಧರ್ಮದ ವ್ಯಕ್ತಿತ್ವ ಹೊಂದಿದವರು, ಸಾವಿರಾರು ಮಕ್ಕಳಿಗೆ ವಿದ್ಯಾದಾನ ಮಾಡುವ ಮೂಲಕ ನೆಚ್ಚಿನ ಗುರುಗಳಾಗಿದ್ದರು, ಬಿಜೆಪಿ ಮಂಡಳ ಅಧ್ಯಕ್ಷರಾಗಿ ಸಕ್ರಿಯವಾಗಿ ಆಡಳಿತ ನಡೆಸಿದ ಕಿರ್ತಿ ಇವರ ಮುಡಿಗೆ ಸೇರುತ್ತದೆ, ಇನ್ನು ಇವರ ಸಾಧನೆಗೆ ಸಿರಿಯಣ್ಣ ನವರ ಸ್ಮರಣೆ ಚಿರಸ್ಥಾಯಿಯಾಗಿ ಉಳಿಸಲಾಗುತ್ತದೆ, ಎಂದರು.

ಗೊಲ್ಲ ನೌಕರರ ಸಂಘದ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಮಂಜುನಾಥ್ ಯಾದವ್ ಮಾತನಾಡಿ, ಬಿವಿ.ಸಿರಿಯಣ್ಣ ನವರು ಕೇವಲ ವ್ಯಕ್ತಿಯಲ್ಲ ಅವರು ಒಂದು ಶಕ್ತಿ, ಬದಲಾಗಿ ಅವರ ನೀಡಿದ ಜ್ಞಾನ ದೀವಿಗೆ ಇಂದು ನೂರಾರು ವಿದ್ಯಾರ್ಥಿಗಳು ಜೀವನದ ಬೆಳಕಾಗಿದೆ, ಅದರಂತೆ ಶಿಕ್ಷಣ ಸಂಸ್ಥೆಗಳು ತೆರೆದು, ಅನೇಕ ಮಕ್ಕಳಿಗೆ ವಿದ್ಯಾದಾನ ಮಾಡಿದ್ದಾರೆ ಅದರಂತೆ ಶಿಕ್ಷಣ ರಂಗದಲ್ಲಿ ಅಲ್ಲದೇ ರಾಜಕೀಯ ರಂಗದಲ್ಲಿ ಕೂಡ ಉತ್ತಮ ಆಡಳಿತ ಮೂಲಕ ಜನಮನ್ನಣೆ ಗಳಿಸಿದ ಎಲ್ಲಾರ ಪಾಲಿನ ಅಪ್ಪಾಜಿಯಾಗಿ ಉಳಿದಿದ್ದಾರೆ ಎಂದರು.

ಶಿಕ್ಷಣ ಪ್ರೇಮಿ
ದಿ.ಬಿ.ವಿ. ಸಿರಿಯಣ್ಣ ಮಾಸ್ಟರ್ ಅಭಿಮಾನಿ ಬಳಗದ ವತಿಯಿಂದ ಬಿವಿ ಸಿರಿಯಣ್ಣನವರ ಪ್ರಥಮ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಚಳ್ಳಕೆರೆ ನಗರದ ಸರ್ಕಾರಿ ತಾಲೂಕು ಆಸ್ಪತ್ರೆಯ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣು ವಿತರಣೆ ಮಾಡುವ ಮುಖಾಂತರ ವಿಶಿಷ್ಟವಾಗಿ ಆಚರಿಸಿದ್ದರು.

ಹೇಳಿಕೆ :

ವ್ಯಕ್ತಿ ಮುಖ್ಯವಲ್ಲ, ಅವರು‌ ಮಾಡಿದ ಸಾಧನೆ ಮುಖ್ಯ ಎನ್ನುವುದಕ್ಕೆ ಸಿರಿಯಣ್ಣ ನವರು ನೀಡಿದ ವಿದ್ಯಾದಾನವೇ ಇಂದು ಅವರು ಹೆಸರು ಚಿರಸ್ಥಾಯಿಯಾಗಿ ಉಳಿಯಲು, ಅವರ ಅಭಿಮಾನಿಗಳು ಚಿತ್ರದುರ್ಗ ರಸ್ತೆಯ ಡಿವೈಎಸ್ ಪಿ ಕಚೇರಿ ಪಕ್ಕದ ರಸ್ತೆಗೆ ಬಿವಿ.ಸಿರಿಯಣ್ಣ ರಸ್ತೆ ಎಂದು ನಾಮಕರಣ ಮಾಡಿದ ಹೆಗ್ಗಳಿಕೆ ಇವರಿಗೆ ಸಲ್ಲಿತ್ತದೆ..—

ಪುಷ್ಪಾವತಿ, ಮುರುಳಿಧರ ವಿದ್ಯಾಸಂಸ್ಥೆಯ ಕಾರ್ಯದರ್ಶಿ

ಈ ಸಂದರ್ಭದಲ್ಲಿ ತಾಲೂಕ ಪಂಚಾಯತಿ ಮಾಜಿ ಅಧ್ಯಕ್ಷರಾದ
ಉಪ್ಪಾರಟ್ಟಿ ಅಜ್ಜಪ್ಪನವರು, ಉದ್ಯಮಿಯಾದ ರವೀಂದ್ರ ಆಚಾರ್, ಜಿಲ್ಲಾ ಅಹಿಂದ ರಕ್ಷಣಾ ವೇದಿಕೆ ಅಧ್ಯಕ್ಷರಾದ ತಿಪ್ಪೇಸ್ವಾಮಿ, ಗೊಲ್ಲ ನೌಕರರ ಸಂಘದ ಗೌರವ ಅಧ್ಯಕ್ಷರಾದ ಪ್ರೊಫೆಸರ್ ಮಂಜುನಾಥ್ ಯಾದವ್, ಮುರುಳಿಧರ ವಿದ್ಯಾಸಂಸ್ಥೆಯ ಕಾರ್ಯದರ್ಶಿಯವರಾದ ಪುಷ್ಪಾವತಿ, ಮಾಸ್ಟರ್ ಪರೀಕ್ಷಿತರಾಜ್,ದೊಡ್ಡೇರಿ ಮಂಜಣ್ಣ, ಗೋಕಲ ಪತ್ತಿನ ಸೌಹಾರ್ದ ಸಹಕಾರಿ ನಿಯಮಿತ ಬ್ಯಾಂಕ್ ಮ್ಯಾನೇಜರ್ ಆದ ಜಿ.ಪಿ. ಶಶಿಧರ್, ದೇವರ ಮರುಕುಂಟೆ ಈರಣ್ಣ ಹೆಗಡೆ, ಜುಂಜರಗುಂಟೆ ತಿಮ್ಮಣ್ಣ ಮತ್ತಿತರು ಉಪಸ್ಥಿತರಿದ್ದರು.

About The Author

Namma Challakere Local News
error: Content is protected !!