ಚಳ್ಳಕೆರೆ : ಮೈರಾಡ ಕಾಲೋನಿಯಲ್ಲಿ ಊರ ಮಾರಮ್ಮಜಾತ್ರೆ ಅತ್ಯಂತ ಸಂಭ್ರಮ ಸಡಗರಿಂದ ಅದ್ದೂರಿಯಾಗಿ ಜರುಗಿತು.
ಇನ್ನೂ ನಗರದ ಪಾವಗಡ ರಸ್ತೆಯಲ್ಲಿ ಇರುವ ಮೈರಾಡ ಕಾಲೋನಿಯ ನಿವಾಸಿಗಳು ಐದು ವರ್ಷಗಳಗೊಮ್ಮೆ ಮಾಡುವ ಶ್ರೀ ಊರಮಾರಮ್ಮ ದೇವಿ ಜಾತ್ರೆ ಸಂಪ್ರದಾಯ ಬದ್ದವಾಗಿ ನೆರೆವೆರಿಸಿದರು.
ಇನ್ನೂ ಮೈರಾಡ ಕಾಲೋನಿಯ ಜೆಡಿಎಸ್ ಮುಖಂಡ ಮಹೇಶ್ ಮಾತನಾಡಿ, ನಮ್ಮ ನಗರದಲ್ಲಿ ಪ್ರತಿ ಐದು ವರ್ಷಕ್ಕೊಮ್ಮೆ ಸರ್ವ ಜನಾಂಗದವರು ಸೇರಿ ಊರಮಾರಮ್ಮ ಜಾತ್ರೆ ಮಾಡುತ್ತೆವೆ, ಇಲ್ಲಿನ ಗ್ರಾಮ ದೇವತೆಯಾದ ಮಾರಮ್ಮ ದೇವಿ ಉತ್ಸವ ಕಳೆದ ಒಂದು ವಾರದಿಂದ ಪೂಜಾ ವಿಧಿ ವಿಧಾನಗಳು ಜರುಗಿದವು,ಅದರಂತೆ ಜೆಡಿಎಸ್ ನ ಪರಾಜಿತ ಅಭ್ಯರ್ಥಿ ಎಂ.ರವೀಶ್, ಹಾಗೂ ತಾಲೂಕು ಅಧ್ಯಕ್ಷ ಪಿ.ತಿಪ್ಪೇಸ್ವಾಮಿ, ನಿಕಟ ಪೂರ್ವ ತಹಶಿಲ್ದಾರ್ ಎನ್.ರಘುಮೂರ್ತಿ, ಎತ್ತಿನಹಟ್ಟಿ ಗೌಡ್ರು, ಇತರರು ಭಾಗವಹಿಸಿದ್ದರು ಎಂದರು.

