ಚಳ್ಳಕೆರೆ : ಸ್ವತಂ ಹುಟ್ಟೂರಿನಲ್ಲಿ ಇಂಥ ವಿಶೇಷ ಕಾರ್ಯಕ್ರಮದಲ್ಲಿ ಭಾಗವಹಿಸಿ “ಗ್ರಾಮ ರತ್ನ” ಪುರಸ್ಕಾರವನ್ನು ಸ್ವೀಕರಿಸುವುದಕ್ಕೆ ತುಂಬಾ ಸಂತೋಷವಾಗುತ್ತಿದೆ , ಇದು ಭಾರತ ರತ್ನ ಕ್ಕಿಂತ ದೊಡ್ಡ ಪುರಸ್ಕಾರ ಎಂದು ನ್ಯಾಯಾಧೀಶರಾದ ಮಧು ಎನ್ ಆರ್ ಹೇಳಿದರು.
ಚಳ್ಳಕೆರೆ ತಾಲ್ಲೂಕಿನ ನಗರಂಗೆರೆಯಲ್ಲಿ ಶ್ರೀ ಮಾರಿಕಾಂಬಾ ಜಾತ್ರಾ ಮಹತ್ಸೋವದಲ್ಲಿ ‘ಗ್ರಾಮ ರತ್ನ” ಗೌರವ ಪುರಸ್ಕಾರ ಸಮಾರಂಭವನ್ನು
ಊರಿನ ಪ್ರತಿಭಾವಂತ ವ್ಯಕ್ತಿಗಳಿಗೆ ಏರ್ಪಡಿಸಲಾಗಿತ್ತು.
ನಗರಂಗೆರೆ , ದಾಸನಾಯಕನಹಟ್ಟಿ , ಗಾನಪ್ಪನಹಟ್ಟಿ, ನರಹರಿನಗರ ಗ್ರಾಮದ 8 ಪಿಎಚ್ ಡಿ (Doctorates) ಪಧವೀಧರರಿಗೆ , ಮತ್ತು 8 ವೈದ್ಯರಿಗೆ (Doctors) “ಗ್ರಾಮ ರತ್ನ” ಪುರಸ್ಕಾರ ನೀಡಿ ಪ್ರಮಾಣ ಪತ್ರ , ಸ್ಮರಣಿಕೆ,ನೀಡಿ ಮಾತನಾಡಿದರು,
ಕಾರ್ಯಕ್ರಮದಲ್ಲಿ ಅತ್ತ್ಯುತ್ತಮ ಸಾಧನೆ ಮಾಡಿದ ಐಎಎಸ್ ಅಧಿಕಾರಿ ಶ್ಯಾನುಭೋಗ್ ನಾಗರಾಜ , ಗಿರೀಶ್ ಕಮಿಷನರ್ ಕಮ್ ಸೆಕ್ರೆಟರಿ , ಒಡಿಶಾ ಸರ್ಕಾರ ಮತ್ತು ನ್ಯಾಯಾಧೀಶರಾದ ಮಧು ಎನ್ ಆರ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು .
ಐಎಎಸ್ ಅಧಿಕಾರಿಯವರ ಅನುಪಸ್ಥಿತಿಯಲ್ಲಿ ಅವರ ತಂದೆ ತಾಯಿ ನಾಗರಾಜ ಮತ್ತು ಸಾವಿತ್ರಮ್ಮ ಅವರ ಮಗನ ಪರವಾಗಿ “ಗ್ರಾಮ ರತ್ನ” ಪುರಸ್ಕಾರವನ್ನು ಸ್ವೀಕರಿಸಿ ನಮ್ಮ ಊರಿನಲ್ಲಿ ಇಷ್ಟೊಂದು ವಿದ್ಯಾವಂತರು ಇದ್ದು ಅವರನ್ನು ಗುರುತಿಸಿದು ನೀವು ಅಧ್ಭುತ ಸಮಾರಂಭವನ್ನು ಆಯೋಜಿಸಿರುವುದು ಬಹಳ ಸಂತೋಷ ತಂದಿದೆ ಎಂದರು.
ಗ್ರಾಮದ ಜನರಿಗೆ ಅವರ ಗ್ರಾಮ ರತ್ನಗಳ ಕಿರು ಪರಿಚಯವನ್ನು ಅವರದೇ ಊರಿನ ವಿದ್ಯಾವಂತರು ಬಹಳ ನಾಜೂಕಾಗಿ ಮಾಡಿಕೊಟ್ಟರು. ಊರಿನ ಗ್ರಾಮಸ್ಥರು ಬಹಳ ಕಾತುರದಿಂದ, ಪ್ರೀತಿಯಿಂದ, ಸಾವಧಾನದಿಂದ ವೀಕ್ಷಿಸಿ ಸಮಾರಂಭಕ್ಕೆ ಸಾಕ್ಷಿಯಾದರು.
ಇದೇ ಸಂಧರ್ಭದಲ್ಲಿ
ಎಂ . ಕುಮಾರಸ್ವಾಮಿ ಗ್ರಾಮದ ಮುಖಂಡರು, ಕೆ ಬಿ ತಿಪ್ಪೇಸ್ವಾಮಿ , ವಕೀಲರು, ಎಂ.ಎಸ ವಿಶ್ವನಾಥ್ , ವಕೀಲರು , ಕೆ ಆರ್ ತಿಪ್ಪೇಸ್ವಾಮಿ, ಸಾಫ್ಟ್ ವೇರ್ ಇಂಜಿನಿಯರ್ ಇತರಿದ್ದರು.

