ಜಿಲ್ಲಾಡಳಿತ ಚಿತ್ರದುರ್ಗ ನಗರಸಭೆ ಚಳ್ಳಕೆರೆ, ಹಾಗೂ ಲೀಡ್‌ ಬ್ಯಾಂಕ್‌ ಚಿತ್ರದುರ್ಗ ಇವರ ಸಹಯೋಗದೊಂದಿಗೆ
PMJJBY/PMSBY & APY ಸಾಮಾಜಿಕ ಭದ್ರತಾ ಯೋಜನೆಗಳು, ಕಂದಾಯ ವಸೂಲಾತಿ ಆಂದೋಲನ,
ಐ.ಇ.ಸಿ
ಚಟುವಟಿಕೆ ಹಾಗೂ ಎ.ಹೆಚ್.ಪಿ ಯೋಜನೆಯಡಿ ಸರ್ವರಿಗೂ ಸೂರು ಯೋಜನೆಗಳ ಬಗ್ಗೆ ಅರಿವು ಮೂಡಿಸುವ ಜಾಗೃತಿ
ಅಭಿಯಾನ ಕಾರ್ಯಕ್ರಮ,ವನ್ನು ಚಳ್ಳಕೆರೆ ನಗರದ ಎಸ್ ಬಿಐ ಬ್ಯಾಂಕ್ ಸಮೀಪದಲ್ಲಿ ನಗರಸಭೆ ಪೌರಾಯುಕ್ತ ಜಗರೆಡ್ಡಿ ನೇತೃತ್ವದಲ್ಲಿ ಆಯೋಜಿಸಲಾಗಿತ್ತು.

ಸಾಮಾಜಿಕ ಭದ್ರತಾ ಯೋಜನೆಗಳು ರಾಷ್ಟ್ರೀಕೃತ ಯೋಜನೆಗಳಾಗಿದ್ದು, ಈ ಯೋಜನೆಗಳಿಗೆ ಸಂಬಂಧಪಟ್ಟ ಅರ್ಹ
ಫಲಾನುಭವಿಗಳು ನಿಗದಿತ ದಿನಾಂಕದಂದು ನಿಮ್ಮ ಸಮೀಪದ ಶಿಬಿರಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ
ಯೋಜನೆಗಳ ಮಾಹಿತಿ/ಸದುಪಯೋಗವನ್ನು ಪಡೆದುಕೊಳ್ಳಲು ಹಾಗೂ ನಗರಸಭೆಗೆ ಪಾವತಿಸಬೇಕಾದ ಬಾಕಿ
ಉಳಿಸಿಕೊಂಡಿರುವ ಆಸ್ತಿ ತೆರಿಗೆ, ನೀರಿನ ಶುಲ್ಕ, ಉದ್ದಿಮೆ ಪರವಾನಿಗೆ ಶುಲ್ಕವನ್ನು ಪಾವತಿಸಿ ಚಳ್ಳಕೆರೆ ನಗರದ
ಅಭಿವೃದ್ಧಿಗೆ ಸಹಕರಿಸುವುದು ಹಾಗೂ ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ ಪಾವಗಡ ರಸ್ತೆಯ ಕೆ.ಹೆಚ್.ಬಿ
ಲೇಔಟ್‌ನಲ್ಲಿ ಜಿ+2 ಮಾದರಿಯ 1008 ಮನೆಗಳನ್ನು ನಿರ್ಮಿಸಲು ಸರ್ಕಾರದಿಂದ ಅನುಮೋದನೆ ಪಡೆಯಲಾಗಿದ್ದು,
ಈ ಪೈಕಿ ಈಗಾಗಲೇ 360 ಮನೆಗಳು ನಿರ್ಮಾಣಗೊಂಡಿದ್ದು, ಸದರಿ ಮನೆಗಳನ್ನು ಅತೀ ತುರ್ತಾಗಿ ಅರ್ಹ ವಸತಿ
ರಹಿತ ಕುಟುಂಬಗಳಿಗೆ ನೀಡಲು ತಿಖಿಸಿದ್ದಾರೆ.

ಇದೇ ಸಂಧರ್ಭದಲ್ಲಿ ನಗರಸಭೆ ಸಮುದಾಯ‌ ಸಂಘಟನಾಧಿಕಾರಿ ಭೂತಯ್ಯ, ಇತರರು ಸಾರ್ವಜನಿಕರು ಇದ್ದರು.

About The Author

Namma Challakere Local News
error: Content is protected !!