ಚಳ್ಳಕೆರೆ : ಪ್ರಯಾಣಿಕರ ಸೋಗಿನಲ್ಲಿ ವೃದ್ದೆಯ ಮಾಂಗಲ್ಯ ಸರ ಕದ್ದ ಕಳ್ಳರು.
ಹೌದು ನಗರದ ಚಳ್ಳಕೆರೆ ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿ ಬಳ್ಳಾರಿ ಮಾರ್ಗವಾಗಿ ತೆರಳುವ ಕೆಎಸ್ಆರ್ಟಿಸಿ ಬಸ್ ನಿಲ್ದಾಣದಲ್ಲಿ
ಬಸ್ ಹತ್ತುವಾಗ ಪ್ರಯಾಣಿಕರ ಸೋಗಿನಲ್ಲಿ ವೃದ್ದೆಯ ಕೊರಳಲ್ಲಿ ಇರುವ ಮಾಂಗಲ್ಯ ಸರವನ್ನು ಕಳ್ಳರು ಕದ್ದೊಯಿದಿದ್ದಾರೆ.
ಇನ್ನು ಬಸ್ ಹತ್ತಿ ಕೊರಳು ನೋಡಿಕೊಂಡ ವೃದ್ದೆ ಅನುಸೂಯಮ್ಮ ಗಾಬರಿಗೊಂಡು ಅಳುತ್ತಿದನ್ನು ನೋಡಿದ ಸ್ಥಳದಲ್ಲೇ ಇರುವ ಸಹ ಪ್ರಯಾಣಿಕರು ಸಂಪೂರ್ಣವಾಗಿ ಬಳ್ಳಾರಿಗೆ ತೆರಳುವ ಕೆಎಸ್ಆರ್ಟಿಸಿ ಬಸ್ಸನ್ನು ಚಳ್ಳಕೆರೆ ಪೊಲೀಸ್ ಠಾಣೆಗೆ ತಂದು ಪೊಲೀಸರ ಸಮ್ಮುಖದಲ್ಲಿ ಎಲ್ಲಾ ಪ್ರಯಾಣಿಕರನ್ನು ಪರಿಶೀಲಿಸಿ ಅನುಮಾನ ಗೊಂಡ ಕೆಲ ಪ್ರಯಾಣಿಕರನ್ನು ಠಾಣೆಯಲ್ಲಿ ಪರಿಶೀಲಿಸಿ ನಂತರ ಬಿಡುಗಡೆಗೊಳಿಸಿದರು,
ಇನ್ನೂ ಹೆಚ್ಚಿನ ತನಿಖೆಗಾಗಿ ನಗರ ಪೊಲೀಸ್ ಠಾಣೆಯ ಪೊಲೀಸರು, ಕೆ ಎಸ್ ಆರ್ ಟಿ ಸಿ ಬಸ್ ನಿಲ್ದಾಣದಲ್ಲಿರುವ ಸಿ ಸಿ ಕ್ಯಾಮೆರಾ ಪರಿಶೀಲನೆ ನಡೆಸಿ ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.


