ಚಳ್ಳಕೆರೆ :
ಚಿತ್ರದುರ್ಗ ಜಿಲ್ಲೆಯ ಜೀವನಾಡಿಯಾದ ಭದ್ರಾ ಮೇಲ್ದಂಡೆ ಯೋಜನೆಯ ಕಾಮಗಾರಿ ಕಳೆದ 25 ವರ್ಷಗಳಿಂದ ಯೋಜನೆ, ರಾಜಕಾರಣಿಗಳ ಹಿಚ್ಚಶಕ್ತಿ ಕೊರತೆಯಿಂದ ನಲುಗುತ್ತಿದೆ, ರೈತರ ಕೃಷಿ ಭೂಮಿಗಳಿಗೆ ನೀರು ಬಿಡದೆ ನಮ್ಮನ್ನು ಆಳುವ ಸರಕಾರಗಳು ನಿರ್ಲಕ್ಷ್ಯ ಮಾಡುತ್ತಿವೆ ಎಂದು
ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಚಳ್ಳಕೆರೆ ಶಾಖೆಯ ರಾಜ್ಯ ಕಾರ್ಯದರ್ಶಿ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಮನವಿ ಸಲ್ಲಿಸಿ ಆಕ್ರೋಶ ವ್ಯಕ್ತಪಡಿಸಿದರು.

ಅವರು ನಗರದ ತಾಲೂಕು ಕಚೇರಿಯಲ್ಲಿ ಉಪ ತಹಶಿಲ್ದಾರ್ ಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಬಯಲು ಸೀಮೆ ಚಳ್ಳಕೆರೆ,
ಮೊಳಕಾಲ್ಮೂರು, ಭಾಗಕ್ಕೆ ಬರಬೇಕಾದ ನೀರು ಇದುವರೆಗೆ ಬಾರದೆ ಕೇವಲ ಸರ್ಕಾರದ ಭರವಸೆ ಮಾತಾಗಿ ಉಳಿದಿದೆ.

ಇನ್ನು ಈ ಭಾಗದ ರೈತರು ಭದ್ರಾ ಮೇಲ್ದಂಡೆ ನೀರಿಗಾಗಿ ಬಕಾಪಕ್ಷಿತರ ಕಾಯುವಂತಾಗಿದೆ ನಮ್ಮ ಆಳುವ ಸರ್ಕಾರಗಳು ರೈತರ ಹಿತದೃಷ್ಟಿಯಿಂದ ಅತಿ ತುರ್ತಾಗಿ 25 ವರ್ಷಗಳ ಹೋರಾಟದ ಫಲವಾಗಿ ಭದ್ರಾ ಮೇಲ್ದಂಡೆ ಯೋಜನೆ ಕಾಮಗಾರಿಯನ್ನು ಶೀಘ್ರವೇ ಮುಗಿಸಿ ರೈತರಿಗೆ ಹಾಗೂ ಬಯಲುಸೀಮೆ ಪ್ರದೇಶದ ಮೊಳಕಾಲ್ಮೂರು, ಚಳ್ಳಕೆರೆ ತಾಲೂಕುಗಳಿಗೆ ನೀರು ಬಿಡಬೇಕೆಂದು ಒತ್ತಾಯಿಸಿದರು.

ಇದೇ ಸಂಧರ್ಭದಲ್ಲಿ ಜಿಲ್ಲಾ ಉಪಾಧ್ಯಕ್ಷ ಹಿರೇಹಳ್ಳಿ ತಿಪ್ಪೇಸ್ವಾಮಿ ಪ್ರಕಾಶ್ ಕೆ ಗಂಗಾಧರ ಡಿ ಚಂದ್ರಶೇಖರ್ ನಾಯ್ಕ ಹಿರೇಹಳ್ಳಿ ತಿಪ್ಪೇಸ್ವಾಮಿ ನಾಗರಾಜ್ ಇತರರು ಪಾಲ್ಗೊಂಡಿದ್ದರು.

About The Author

Namma Challakere Local News
error: Content is protected !!