ಭಕ್ತಿ ಭಾವ ಮತ್ತು ಧಾರ್ಮಿಕ ಭಾವನೆಗಳ ನೆಲೆ ನಾಡು ಚಳ್ಳಕೆರೆ ಮತ್ತು ಮೊಳಕಾಲ್ಮೂರು ತಾಲ್ಲೂಕು ಎಂದು ನಿವೃತ್ತ ಕೆಎಎಸ್ ಅಧಿಕಾರಿ ಎನ್ ರಘುಮೂರ್ತಿ ಹೇಳಿದರು

ಅವರು ಮೊಳಕಾಲ್ಮೂರು ಕಸಬಾ ಹೋಬಳಿಯ ರಾಯಪುರ ಮ್ಯಾಸರಹಟ್ಟಿ ಗ್ರಾಮದಲ್ಲಿ ಕಟ್ಟೆ ಗುಡ್ಡದ ಮಾರಮ್ಮ ದೇವಿಯ ಸಿಡಿ ಉತ್ಸವದಲ್ಲಿ ಪಾಲ್ಗೊಂಡು ಮಾತನಾಡಿ,

ಎಲ್ಲಿ ಭಕ್ತಿ ಮತ್ತು ನಂಬಿಕೆಗಳಿರುತ್ತದೆಯೋ ಅಲ್ಲೇ ಶಾಂತಿ ಮತ್ತು ಸಮೃದ್ಧಿ ನೆರಸಿರುತ್ತದೆ ಜಾತಿ ಪಕ್ಷ ಮತ್ತು ವರ್ಗರಹಿತವಾದಂತ ಸಮಾಜ ನಿರ್ಮಾಣವಾಗಬೇಕಾದರೆ ಇಂತಹ ಭಾವನೆಗಳು ಸರ್ವಕಾಲಕ್ಕೂ ಜೀವಂತವಾಗಿರಬೇಕು ಈ ತಾಲೂಕುಗಳಲ್ಲಿರುವಂತಹ ಈ ವಾತಾವರಣವನ್ನು ರಾಜ್ಯದ ಬೇರೆ ಎಲ್ಲೂ ಕೂಡ ಕಾಣಲು ಸಾಧ್ಯವಿಲ್ಲ ಈ ಜಗನ್ಮಾತೆ ಇಡೀ ತಾಲೂಕಿನ ಎಲ್ಲ ಜನತೆಗೆ ಸುಖ ಶಾಂತಿ ನೆಮ್ಮದಿ ಮತ್ತು ಐಶ್ವರ್ಯವನ್ನು ನೀಡಿ ಆಶೀರ್ವದಿಸಲಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲ್ಲಿ ಗ್ರಾಮಸ್ಥರಾದ ನಂದೀಶ ಮ್ಯಾಸರಟ್ಟಿ ಗ್ರಾಮಸ್ಥರು ಮುಂತಾದವರು ಉಪಸ್ಥಿತರಿದ್ದರು

About The Author

Namma Challakere Local News
error: Content is protected !!