filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: video;hw-remosaic: false;touch: (-1.0, -1.0);sceneMode: 0;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 38;

ಚಳ್ಳಕೆರೆ : ರಾಜ್ಯ ಸರಕಾರ
ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಸಿಕೊಳ್ಳದೆ ಕೇವಲ ರಾಜ್ಯದ ದ್ವೀಭಾಷ ನೀತಿ ಅಳವಡಿಸಿಕೊಂಡಿರುವುದು ವಿದ್ಯಾವಂತ ಮಕ್ಕಳಿಗೆ ಕಡಿವಾಣ ಹಾಕಿದಂತೆ ಹಾಗಿದೆ ಎಂದು ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಸಂಸದರಾದ ಗೋವಿಂದ ಎಂ.ಕಾರಜೋಳ ಹೇಳಿದರು.

ಅವರು ನಗರದ ಹೊಂಗಿರಣ ಇಂಟರ್ನ್ಯಾಷನಲ್ ಆಂಗ್ಲ ಮಾಧ್ಯಮ ಶಾಲೆಯ 2025-26 ರ ಶಾಲಾ ವಾರ್ಷಿಕೋತ್ಸವದ ಸಮಾರಂಭದಲ್ಲಿ ದೀಪ ಬೆಳಗುವುದರ ಮೂಲಕ ಚಾಲನೆ ನೀಡಿ ಮಾತನಾಡಿದರು,
ದೇಶದಲ್ಲಿ ಎರಡು ತರಹದ ಶಿಕ್ಷಣ ನೀತಿಯಿದೆ, ಶ್ರೀಮಂತ ಮಕ್ಕಳಿಗೆ ಒಂದು ಶಿಕ್ಷಣ, ಬಡವರ ಮಕ್ಕಳಿಗೆ ಒಂದು ಶಿಕ್ಷಣ,ಈಗೇ ದೇಶದಲ್ಲಿ ಎರಡು ರೀತಿಯ ಶಿಕ್ಷಣ ನೀತಿಗಳನ್ನು ಕಾಣುತ್ತಿದ್ದೇವೆ,ಆದ್ದರಿಂದ ದೇಶದ ಪ್ರಧಾನ ಮಂತ್ರಿಗಳು ನ್ಯಾಷನಲ್ ಎಜುಕೇಶನ್ ನೀತಿಯನ್ನು ಜಾರಿಗೊಳಿಸಿದೆ, ಇದರಿಂದ ತ್ರೀಭಾಷ ಶಿಕ್ಷಣ ನೀಡುತ್ತದೆ, ಆದರೆ ರಾಜ್ಯ ಸರ್ಕಾರ ಕೇವಲ ರಾಜ್ಯ ಶಿಕ್ಷಣ ನೀತಿ ಅಳವಡಿಸಿಕೊಂಡು ದ್ವೀ ಭಾಷೆಯಲ್ಲಿ ಶಿಕ್ಷಣ ನೀಡುವುದರಿಂದ ವಿದ್ಯಾವಂತ ಮಕ್ಕಳಿಗೆ ಕಡಿವಾಣ ಹಾಕಿದಂತೆ ಹಾಗುತ್ತಿದೆ ಆದ್ದರಿಂದ ಈ ವೇದಿಕೆಯಿಂದ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಮಾಡಬೇಕು ಎಂದು
ರಾಜ್ಯ ಸರಕಾರಕ್ಕೆ ಸೂಚಿಸುತ್ತೆನೆ ಎಂದರು.

ಇನ್ನೂ ಸಂಸ್ಥೆಯ ಅಧ್ಯಕ್ಷರಾದ ಹೆಚ್.ಎಸ್.ರಾಜೇಶ್ ಗುಪ್ತ ಮಾತನಾಡಿ, ಇಂದಿನ ಮಕ್ಕಳಿಗೆ ಉತ್ತಮ ಗುಣಮಟ್ಟದ ಶಿಕ್ಷಣ ಅನಿವಾರ್ಯ, ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ಮುಂದಿನ ಭವಿಷ್ಯಕ್ಕೆ ಪಣತೊಡಬೇಕು ಎಂದರು.

ಇದೇ ಸಂಧರ್ಭದಲ್ಲಿ ಮುಖ್ಯ ಅತಿಥಿಗಳಾದ ಡಾ.ರುದ್ರಯ್ಯ ಹಿರೇಮಠ, ಜಿಆರ್ .ಜಯಸಿಂಹ, ಶಾಲೆಯ ಅಧ್ಯಕ್ಷ ಡಿ.ನಾಗಪ್ಪ, ಕಾರ್ಯದರ್ಶಿಯಾದ ದಯಾನಂದ ಪ್ರಹ್ಲಾದ್, ಜಂಟಿ ಕಾರ್ಯದರ್ಶಿ ತಿಪ್ಪೇಸ್ವಾಮಿ, ನಿರ್ದೇಶಕರಾದ ನಿರ್ದೇಶಕರಾದ ಶಿವಪ್ರಸಾದ್, ಮಧುಸೂದನ್, ಕಲ್ಪನಾ ರಾಜೇಶ್,
ಪೋಷಕರಾದ ರಾಮಕೃಷ್ಣ, ತಿಪ್ಪೇಸ್ವಾಮಿ, ರಮೇಶ್, ನಾಗರಾಜ್ , ಸುಧನ್ವ, ಬಿಜೆಪಿ ಜಿಲ್ಲಾಧ್ಯಕ್ಷ ಕೆ ಟಿ ಕುಮಾರಸ್ವಾಮಿ, ತಾಲೂಕ ಅಧ್ಯಕ್ಷ ಸುರೇಶ್, ಬಿಜೆಪಿ ಪ್ರಧಾನ ಕಾರ್ಯದರ್ಶಿ ಬಾಳೆಕಾಯಿ ರಾಮದಾಸ್ , ಬಿಜೆಪಿ ಮುಖಂಡ ಜಯ ಪಾಲಯ್ಯ , ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಓಬಳೇಶ್, ಇನ್ನಿತರ ಹಲವಾರು ಮುಖಂಡರುಗಳು ,ಪೋಷಕರು ಮಕ್ಕಳು ಹಾಜರಿದ್ದರು.

About The Author

Namma Challakere Local News
error: Content is protected !!