ಚಳ್ಳಕೆರೆ : ಮಾರ್ಕ್ ಸಿನಿಮಾ ಬಿಡುಗಡೆ ದಿನದಂದು ಕಿಚ್ಚನ ಅಭಿಮಾನಿಗಳಿಗೆ ಅಘಾತ
ಹೌದು ಚಳ್ಳಕೆರೆ ನಗರದಲ್ಲಿ ಕಿಚ್ಚನ ಸಾವಿರಾರು ಅಭಿಮಾನಿಗಳು ಮಾರ್ಕ ಸಿನಿಮಾ ಬಿಡುಗಡೆ ದಿನದಂದು ಸಾರ್ವಜನಿಕರಿಗೆ ಅನ್ನಸಂತರ್ಪಣೆ ಹಾಗೂ ಹಣ್ಣು ವಿತರಣೆ ಮಾಡಲು ಅಭಿಮಾನಿಗಳು ಉತ್ಸುಕರಾಗಿದ್ದರು ಆದರೆ ಪೋಲೀಸ್ ರಿಂದ ಕಿಚ್ಚ ಅಭಿಮಾನಿಗಳಿಗೆ ನೋವುಂಟು ಮಾಡಿದೆ ಎನ್ನಲಾಗಿದೆ.
ನಗರದ ಸೋಮಗುದ್ದು ರಸ್ತೆಯ ನ್ಯಾಯಾಲಯ ಸಂಕೀರ್ಣದ ಸಮೀಪದ ಮಾರ್ಕ ಸಿನಿಮಾದ ಪ್ಲೆಕ್ಸ್ ಹಾಕಿ ಅಭಿಮಾನಿಗಳಿಂದ ಅನ್ನಸಂತರ್ಪಣೆ ಏರ್ಪಡಿಸಲಾಗಿತ್ತು. ಆದರೆ ಪ್ಲೆಕ್ಸ್ ನಲ್ಲಿ ಕೆಲ ವಾಖ್ಯನಗಳು ದ್ವೇಷ ಪದಗಳಿಂದ ಕೂಡಿದ್ದಾವೆ ಎಂದು ಬ್ಯಾನರ್ , ಶಾಮಿಲು ತೆರವುಗೊಳಿಸಿದ್ದಾರೆ, ಸ್ಟಾರ್ ನಟರ ಅಭಿಮಾನಿಗಳಲ್ಲಿ ಗೊಂದಲ ಉಂಟಾಗಬಹುದು ಎಂದು ಶಾಂತಿ ಸೌಹಾರ್ದ ಕಾಪಾಡಲು ಪೋಲೀಸ್ ರು ತೆರವು ಗೊಳಿಸಿದ್ದಾರೆ ಎನ್ನಲಾಗಿದೆ.

