ಚಳ್ಳಕೆರೆ : ಗ್ರಾಮಸ್ಥರಲ್ಲಿ ಆತಂಕ ಸೃಷ್ಟಿ ಮಾಡಿದ ಚಿರತೆ ಹೆಜ್ಜೆ ಗುರುತು

ಹೌದು ಚಳ್ಳಕೆರೆ ತಾಲೂಕಿನ ಗಿರಿಯಮ್ಮನಹಳ್ಳಿ ಗ್ರಾಮದ ಕುರಿಬೊಮ್ಮಯ್ಯನಹಟ್ಟಿ ಚಿಂತಗುಂಡ್ಲಯ್ಯ ಎಂಬುವವರ ಜಮಿನಿನಲ್ಲಿ ತಡರಾತ್ರಿ ರಾಗಿ ಹೊಲದಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳು ಕಾಣಿಸಿಕೊಂಡಿರುವುದು ತೋಟದ ಮನೆಯ ನಿವಾಸಿಗಳಿಗೆ ಆತಂಕ ಸೃಷ್ಟಿ ಮಾಡಿದೆ.

ಬಯಲು ಸೀಮೆಯಲ್ಲಿ ಚಿರತೆ ಓಡಾಡಿರುವ ಹೆಜ್ಜೆ ಗುರುತುಗಳ ಕಂಡ ಗ್ರಾಮದ ಸಾರ್ವಜನಿಕರು, ಹಾಗೂ ತೋಟದ ಮನೆಯಲ್ಲಿ ಜೀವನ ಸಾಯಿಸುವ ಕುಟುಂಬಗಳು ಜೀವ ಭಯದ ಆತಂಕದಲ್ಲಿ ಜೀವಿಸುವಂತಾಗಿದೆ.

ಇನ್ನೂ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆ ಹೆಜ್ಜೆ ಗುರುತು ಪತ್ತೆ ಹಚ್ಚಿ ತೋಟದಲ್ಲಿ ಜೀವನ ಸಾಗಿಸುವ ರೈತಾಪಿ ಕುಟುಂಬಗಳಿಗೆ ಆಶ್ರಯ ನೀಡಬೇಕು, ಇನ್ನೂ ಚಿರತೆ ಗ್ರಾಮದತ್ತ ಆಗಮಿಸುವ ಮುನ್ನವೇ ಅರಣ್ಯ ಅಧಿಕಾರಿಗಳು ಚಿರತೆ ಸೆರೆಹಿಡಿಯುವರಾ ಕಾದು ನೋಡಬೇಕಿದೆ…

About The Author

Namma Challakere Local News
error: Content is protected !!