‘ಕನ್ನಡದ ಅಸ್ಮಿತೆ ಉಳಿವಿಗೆ ಪಣ ತೊಡಿ ನಿವೃತ್ತ ತಹಶೀಲ್ದಾರ್ ಎನ್ ರಘುಮೂರ್ತಿ.

ನಾಯಕನಹಟ್ಟಿ: ಆಂಗ್ಲಭಾಷೆ ಬಳಕೆ ತಪ್ಪಲ್ಲ ಆದರೆ ಮಾತೃಭಾಷೆ ಕನ್ನಡದ ಅಸ್ಥಿತ ಉಳಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡಬೇಕು ಎಂದು ನಿವೃತ್ತ ತಹಸಿಲ್ದಾರ್ ಎನ್ ರಘುಮೂರ್ತಿ ಕರೆ ನೀಡಿದರು.

ಪಟ್ಟಣದ ಪಾದಗಟ್ಟೆ ಆವರಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣ ವತಿಯಿಂದ ಹಮ್ಮಿಕೊಂಡಿದ್ದ ಐದನೇ ವರ್ಷದ ಕನ್ನಡ ರಾಜ್ಯೋತ್ಸವ ಅವರು ಮಾತನಾಡಿದರು. ರಾಜ್ಯದಲ್ಲಿ ಕನ್ನಡ ಭಾಷೆಗೆ ತನ್ನದೇ ಮಹತ್ವವಿದ್ದು, ಹೆತ್ತ ತಾಯಿಗೆ ಸಮಾನವಾದ ಗೌರವ ಸ್ಥಾನಮಾನವಿದೆ. ವ್ಯಾವಹಾರಿಕತೆ, ವೃತ್ತಿ ಜೀವನಕ್ಕೆ ಅನ್ಯ ಭಾಷೆಗಳು ಅನಿವಾರ್ಯ ವಾಗಿವೆ. ಆದರೆ ಮನೆ-ಮನಗಳಲ್ಲಿ ಕನ್ನಡ ಭಾಷಾಭಿಮಾನ ಮೆರೆಯಬೇಕು. ಪ್ರಕೃತಿಯಲ್ಲಿ ಪ್ರತಿಯೊಂದು ಜೀವ ಸಂಕುಲಕ್ಕೂ ತನ್ನದೇ ಆದ ಭಾಷೆಗಳು
ರೂಢಿಯಲ್ಲಿವೆ. ಮನುಷ್ಯ ಮೌಖಿಕವಾಗಿ ಅಭಿಪ್ರಾಯಗಳನ್ನು ವಿನಿಮಯ ಮಾಡಿಕೊಂಡರೆ, ಪ್ರಾಣಿಗಳು ಅಮೌಖಿಕವಾಗಿ ಸಂಜ್ಞೆ ಹಾವಭಾವ, ಧ್ವನಿಗಳ ಮೂಲಕ ವ್ಯಕ್ತಪಡಿಸುತ್ತವೆ.
ಎ೦ದರು.

ಮಾಜಿ ಪಟ್ಟಣ ಪಂಚಾಯತಿ ಸದಸ್ಯ
ಟಿ ಬಸಪ್ಪ ನಾಯಕ ಮಾತನಾಡಿ, ಕನ್ನಡ ಭಾಷೆನೆಲ, ಜಲ ಸಂರಕ್ಷಣೆ ಪ್ರತಿಯೊಬ್ಬರ ಹೊಣೆ. ಇತ್ತೀಚೆಗೆ ಪೋಷಕರಲ್ಲಿ ಆಂಗ್ಲ ಭಾಷೆ ವ್ಯಾಮೋಹ ಹೆಚ್ಚಾಗುತ್ತಿದೆ. ಮಕ್ಕಳ ಭವಿಷ್ಯಕ್ಕೆಆಂಗ್ಲಭಾಷೆಪೂರಕವಾಗಬೇಕು, ಆದರೆ ಕನಡ ಭಾಷೆಯನ್ನು ಮರೆಯಬಾರದು ಎಂದು ಕಿವಿಮಾತು ಹೇಳಿದರು..

ಕಾರ್ಯಕ್ರಮದಲ್ಲಿ ಎಂವೈಟಿ ಸ್ವಾಮಿ, ರಘುರಾಮ್ ರೆಡ್ಡಿ, ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲೇಶ್, ಎಸ್ ಟಿ ಮೋರ್ಚಾ ಜಿಲ್ಲಾಧ್ಯಕ್ಷ ಪಿ ಶಿವಣ್ಣ, ಪಟ್ಟಣ ಪಂಚಾಯತಿ ಸದಸ್ಯರಾದ ಸೈಯದ್ ಅನ್ವರ್, ಎಂ.ಟಿ. ಮಂಜುನಾಥ್, ನಗರ ಘಟಕ ಅಧ್ಯಕ್ಷ ನಾಗರಾಜ್ ಜಾಗನೂರಹಟ್ಟಿ , ಗುಂತಕೋಲ್ಮನಹಳ್ಳಿ ಜಿ.ಎಂ. ಜಯಣ್ಣ, ಶಿವದತ್ತ, ಡಿ.ಜಿ. ಗೋವಿಂದಪ್ಪ, ಕರ್ನಾಟಕ ರಕ್ಷಣಾ ವೇದಿಕೆ ಪ್ರವೀಣ್ ಶೆಟ್ಟಿ ಬಣದ ತಾಲೂಕು ಅಧ್ಯಕ್ಷ ಮಂಜುನಾಥ್, ಗೌರವಾಧ್ಯಕ್ಷ ಭೋಜರಾಜ್, ಕಾರ್ಯದರ್ಶಿ ಮರಿಕುಂಟೆ ಚಂದ್ರಣ್ಣ,ನಾಯಕನಹಟ್ಟಿ ಹೋಬಳಿ ಘಟಕ ಅಧ್ಯಕ್ಷ ಎನ್ ಬೋರಯ್ಯ, ಉಸ್ತುವಾರಿ ಅಧ್ಯಕ್ಷ ಓಂಕಾರಪ್ಪ ಉಪಾಧ್ಯಕ್ಷ ನಲಗೇತನಹಟ್ಟಿ
ಕಾಟಂಲಿಂಗಯ್ಯ, ಪ್ರಧಾನ ಕಾರ್ಯದರ್ಶಿ ಸುರೇಶ್, ಸಂಘಟನಾ ಕಾರ್ಯದರ್ಶಿ ಕಾಟಯ್ಯ, ಡಾ. ನಾಗರಾಜ್ ಮೀಸೆ, ನವೀನ್ ಮದಕರಿ, ಮಲ್ಲೂರಹಳ್ಳಿ ಪ್ರಸನ್ನ ಗೌಡ, ನಲಗೇತನಹಟ್ಟಿ ಗಾಯಕ ಕೆ.ಟಿ. ಮುತ್ತುರಾಜ್, ಇದ್ದರು.

About The Author

Namma Challakere Local News
error: Content is protected !!